
ಪ್ರಜಾವಾಣಿ ವಾರ್ತೆ
ಮೈಸೂರು: ಕೆ.ಆರ್. ನಗರ ತಾಲ್ಲೂಕಿನ ಹೆಬ್ಬಾಳು ಸಮೀಪ ಗುರುವಾರ ನಸುಕಿನಲ್ಲಿ ಪೊಲೀಸ್ ಜೀಪ್ ಮರಕ್ಕೆ ಡಿಕ್ಕಿ ಹೊಡೆದು ಕೆ.ಆರ್. ನಗರ ಠಾಣೆಯ ಎಎಸ್ಐ ಮೂರ್ತಿ (58) ಹಾಗೂ ಕಾನ್ ಸ್ಟೆಬಲ್ ಶಾಂತಕುಮಾರ್ (45) ಮೃತಪಟ್ಟಿದ್ದಾರೆ.
ಇವರು ರಾತ್ರಿ ಗಸ್ತು ಕಾರ್ಯ ನಡೆಸಿ ಚುಂಚನಕಟ್ಟೆ ಕಡೆಯಿಂದ ಕೆ.ಆರ್. ನಗರದ ಕಡೆಗೆ ಬರುತ್ತಿರುವಾಗ ನಸುಕಿನ 3 ಗಂಟೆ ಸಮಯದಲ್ಲಿ ಸಿದ್ದನಕೊಪ್ಪಲು ಗೇಟ್ ಸಮೀಪ ಜೀಪ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.