ಸಾವಿರಾರು ಭಕ್ತರ ಜಯಘೋಷಗಳೊಂದಿಗೆ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವ ಮಂಗಳವಾರ ಅದ್ದೂರಿಯಾಗಿ ನಡೆಯಿತು. ನಾಡಿನ ವಿವಿಧ ಮೂಲೆಗಳಿಂದ ಬಂದಿದ್ದ ಭಕ್ತರು ಬೆಳಗ್ಗಿನಿಂದಲೇ ಗ್ರಾಮದ ರಥ ಸಾಗುವ ಬೀದಿಯಲ್ಲಿ ಜಮಾಯಿಸಿದ್ದರು. ಕರ್ತೃಗದ್ದುಗೆ ಆವರಣದಲ್ಲಿ ಭಕ್ತರು ‘ಹರಹರ ಮಹದೇವ’, ‘ಜೈ ಶಿವರಾತ್ರೀಶ್ವರ’ ಎಂಬ ಘೋಷಗಳನ್ನು ಕೂಗುತ್ತಾ, ಹೆಬ್ಬಾವಿನ ಗಾತ್ರದ ಮಿಣಿ ಎಳೆಯುತ್ತಿದ್ದರೆ ರಾಜಠೀವಿಯಲ್ಲಿ ರಥವು ಸಾಗಿತು. ನೆರೆದಿದ್ದ ಜನ ರಥಕ್ಕೆ ಹಣ್ಣು-ಜವನ ಎಸೆದು ನಮಿಸಿದರು.ರಥೋತ್ಸವದ ಮೆರವಣಿಗೆಯಲ್ಲಿ ಸಾಗಿದ 40 ಕಲಾತಂಡಗಳು ಶಿಸ್ತಿನಲ್ಲಿ ಹೆಜ್ಜೆ ಹಾಕಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.