ADVERTISEMENT

ನಾನೇನು ತಪ್ಪು ಮಾಡಿದ್ದೇನೆ?: ಅಡ್ಡಂಡ ಕಾರ್ಯಪ್ಪ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 21:16 IST
Last Updated 18 ಡಿಸೆಂಬರ್ 2021, 21:16 IST
ಅಡ್ಡಂಡ ಕಾರ್ಯಪ್ಪ
ಅಡ್ಡಂಡ ಕಾರ್ಯಪ್ಪ   

ಮೈಸೂರು: ‘ನಾನೇನು ತಪ್ಪು ಮಾಡಿದ್ದೇನೆ? ರಂಗಾಯಣಕ್ಕೆ ಕಾಲಿಟ್ಟಾಗಿಂದ ಕೋಮುವಾದಿ ಎಂದು ಜರಿಯುತ್ತಿದ್ದರೆ, ರಾಜಕಾರಣಿಗಳ ಮರ್ಜಿಯಿಂದ ಬಂದವನು ಎಂದು ಅವಮಾನಿಸಿದರೆ ತಾಳ್ಮೆ ಕೆಡುವುದಿಲ್ಲವೇ? ನಾನೂ ಮನುಷ್ಯನಲ್ಲವೇ?’ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪ್ರಶ್ನಿಸಿದ್ದಾರೆ.

ಬಹುರೂಪಿ ಉತ್ಸವಕ್ಕೆ ಚಕ್ರವರ್ತಿ ಸೂಲಿಬೆಲೆ, ಮಾಳವಿಕಾ ಅವಿನಾಶ್‌ ಅವರನ್ನು ಆಹ್ವಾನಿಸಿರುವುದಕ್ಕೆ ವಿರೋಧ, ನಂತರ ನಡೆದಿರುವ ವಾಗ್ವಾದಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ.

‘ಕಳೆದ ವರ್ಷ ‘ಗಾಂಧಿಪಥ’ ನಾಟಕೋತ್ಸವದಲ್ಲೂ ಗಲಾಟೆ ಮಾಡಿದ್ದ ಅದೇ ಗುಂಪು`ಕಾರ್ಯಪ್ಪ ವಜಾ ಆಗಬೇಕು’ ಎಂದು ನನ್ನ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದರೂ ಬಹುರೂಪಿ ಯಶಸ್ವಿಯಾಯಿತು’ ಎಂದುಪ್ರಕಟಣೆಯಲ್ಲಿ ಹೇಳಿದ್ದಾರೆ.

ADVERTISEMENT

‘ಕೊರೊನಾ ಕಾಲದಲ್ಲಿ ಸಾವಿರಾರು ಜನರಿಗೆ ಆಹಾರ ವಿತರಿಸಿದರೆಂದು ಮಾಳವಿಕಾ ಅವಿನಾಶ್, ನದಿ-ಕೆರೆ ಶುದ್ಧೀಕರಣದ ಕಾಯಕದ ವಿಚಾರಕ್ಕೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಆಹ್ವಾನಿಸಲಾಗಿದೆ. ನಾ. ಡಿಸೋಜಾ, ಎಚ್.ಎಸ್. ವೆಂಕಟೇಶ್‍ಮೂರ್ತಿ, ತುಳಸೀಗೌಡ, ಮಾತಾ ಮಂಜಮ್ಮ ಜೋಗತಿ, ಸುರೇಶ್ ಹೆಬ್ಳೀಕರ್, ಟಿ.ಎಸ್. ನಾಗಾಭರಣ, ವಿಜಯಲಕ್ಷ್ಮಿ ಬಾಳೇಕುಂದ್ರಿ ಇದ್ದಾರೆ. ಇಲ್ಲಿಎಡ-ಬಲ ಎಲ್ಲಿ ಕಂಡಿರಿ?’ ಎಂದು ಪ್ರಶ್ನಿಸಿದ್ದಾರೆ.

‘ಸಂಘ ಪರಿವಾರದವನಾದರೆ ‌‌ಏನು ತೊಂದರೆ? ಸರ್ಕಾರ ಅವರಿಗೆ ಇಷ್ಟವಾದವರನ್ನು ನೇಮಿಸುತ್ತವೆ. ಅತಿಥಿಗಳು ಬರಬಾರದೆಂಬ ಏಕತ್ವ ವಾದವೇಕೆ? ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.