ADVERTISEMENT

ಮೈಸೂರು: ನಾಲೆಯಲ್ಲಿ ಓಡಿದ ಕಾಡಾನೆಗಳು

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 8:19 IST
Last Updated 10 ಜನವರಿ 2022, 8:19 IST
ಉಮ್ಮತ್ತೂರು ಗ್ರಾಮದ ಬಳಿ ಲಕ್ಷ್ಮಣತೀರ್ಥ ನದಿಯ ನಾಲೆಗೆ ಇಳಿದ ಆನೆಗಳ ಹಿಂಡು
ಉಮ್ಮತ್ತೂರು ಗ್ರಾಮದ ಬಳಿ ಲಕ್ಷ್ಮಣತೀರ್ಥ ನದಿಯ ನಾಲೆಗೆ ಇಳಿದ ಆನೆಗಳ ಹಿಂಡು   

ಮೈಸೂರು: ಹುಣಸೂರು ತಾಲ್ಲೂಕಿನ ಪೆಂಜಳ್ಳಿ ಸಮೀಪ 6 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಗ್ರಾಮಸ್ಥರು, ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಸೋಮವಾರ ಕಾಡಿಗಟ್ಟುವಳ್ಳಿ ಸಫಲರಾಗಿದ್ದಾರೆ.

ಉಮ್ಮತ್ತೂರು ಗ್ರಾಮದ ಬಳಿ ಲಕ್ಷ್ಮಣತೀರ್ಥ ನದಿಯ ನಾಲೆಗೆ ಇಳಿದ ಆನೆಗಳ ಹಿಂಡು ರಭಸದಿಂದ ಹರಿಯುತ್ತಿದ್ದ ನೀರಿನ ನಡುವೆಯೇ ಓಡಿವೆ. ಕೆಲವೊಂದು ಆನೆಗಳು ನಾಲೆಯಿಂದ ಹೊರಬರಲು ಯತ್ನಿಸಿದರೂ ಆಗದೇ ಮತ್ತೆ ನಾಲೆಗೆ ಇಳಿದಿವೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಿಸಿಎಫ್ ಮಹೇಶ್‌ಕುಮಾರ್, ‘ಎಲ್ಲ ಆನೆಗಳನ್ನು ಸುರಕ್ಷಿತವಾಗಿ ಕಾಡಿಗಟ್ಟಲಾಗಿದೆ. ಪೊಲೀಸರ ನೆರವಿನಿಂದ ಗುಂಪುಗೂಡಿದ್ದ ಗ್ರಾಮಸ್ಥರನ್ನು ಚದುರಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.