ADVERTISEMENT

ಹುಣಸೂರು: ನಾಗಾಪುರ ಪುನರ್ವಸತಿ ಕೇಂದ್ರದಲ್ಲಿ ಕಾಡಾನೆಗಳ ಹಿಂಡು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2022, 6:30 IST
Last Updated 10 ಫೆಬ್ರುವರಿ 2022, 6:30 IST
ನಾಗಾಪುರ ಪುನರ್ವಸತಿ ಕೇಂದ್ರದಲ್ಲಿ ಕಾಡಾನೆಗಳ ಹಿಂಡು
ನಾಗಾಪುರ ಪುನರ್ವಸತಿ ಕೇಂದ್ರದಲ್ಲಿ ಕಾಡಾನೆಗಳ ಹಿಂಡು   

ಮೈಸೂರು: ಹುಣಸೂರು ತಾಲ್ಲೂಕಿನ ನಾಗಾಪುರ ಪುನರ್ವಸತಿ ಕೇಂದ್ರದ ಎರಡನೇ ಬ್ಲಾಕಿನ ವುಡ್ ಲಾಟ್ ಪ್ರದೇಶದಲ್ಲಿ 6 ಆನೆಗಳು ಕಾಣಿಸಿಕೊಂಡಿವೆ.

ನಾಗಾಪುರ ಪ್ರೌಢಶಾಲಾ ಹಿಂಭಾಗದಲ್ಲಿ ಬೀಡು ಬಿಟ್ಟಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಕಳುಹಿಸುವ ಪ್ರಯತ್ನದಲ್ಲಿದ್ದಾರೆ.

ಮೂರು ದಿನದ ಹಿಂದೆ ಇದೇ ಸ್ಥಳದಲ್ಲಿ ಆನೆಯೊಂದು ಶಾಲೆಗೆ ನುಗ್ಗಿ ಆತಂಕ ಸೃಷ್ಟಿಸಿತ್ತು. ನಾಗಾಪುರ ಪುನರ್ವಸತಿ ಕೇಂದ್ರದ ಮನೆಯನ್ನು ಧ್ವಂಸ ಮಾಡಿತ್ತು. ಈಗಲೂ ಎರಡನೇ ಬ್ಲಾಕ್ ಭಾಗದಲ್ಲಿ ಕಾಡಾನೆಗಳು ಸಂಚರಿಸಿ ಜನರಲ್ಲಿ ಭೀತಿ ಸೃಷ್ಟಿಸಿವೆ ಎಂದು ಬ್ಲಾಕ್ ನಿವಾಸಿ ಜೆ.ಕೆ.ಮಣಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.