ADVERTISEMENT

ಸಿಂಧನೂರು: ಆಸ್ಪತ್ರೆಯಲ್ಲಿ ಮೃತಪಟ್ಟ ಶಿಶು ಸ್ಮಶಾನದಲ್ಲಿ ಜೀವಂತ!

​ಪ್ರಜಾವಾಣಿ ವಾರ್ತೆ
Published 15 ಮೇ 2022, 4:57 IST
Last Updated 15 ಮೇ 2022, 4:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಂಧನೂರು: ಚಿಕಿತ್ಸೆ ಪಡೆಯುತ್ತಿದ್ದಶಿಶುಮೃತಪಟ್ಟಿದೆ ಎಂದು ಮಕ್ಕಳ ತಜ್ಞರೊಬ್ಬರು ಘೋಷಿಸಿದ್ದರಿಂದ ಸಂಬಂಧಿಗಳೆಲ್ಲ ಅಂತ್ಯಸಂಸ್ಕಾರಕ್ಕೆ ತೆರಳಿದಾಗ,ಸ್ಮಶಾನದಲ್ಲಿಶಿಶುಇನ್ನೂ ಜೀವಂತವಾಗಿರುವುದು ಕಂಡುಬಂದಿರುವ ಘಟನೆ ತಾಲ್ಲೂಕಿನ ತುರ್ವಿಹಾಳದಲ್ಲಿ ಶನಿವಾರ ನಡೆದಿದೆ.

ತಾಲ್ಲೂಕಿನ ತುರ್ವಿಹಾಳ ಪಟ್ಟಣದ ಈರಪ್ಪ ಮತ್ತು ಅಮರಮ್ಮ ದಂಪತಿಗೆ ಜನಿಸಿದಶಿಶುಇದಾಗಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮಣ್ಣುಪಾಲಾಗುತ್ತಿದ್ದಶಿಶುಸಂಬಂಧಿಗಳು ವಹಿಸಿದ ಜಾಗರೂಕತೆಯಿಂದ ಬದುಕುಳಿದಿದೆ.

ತುರ್ವಿಹಾಳ ಸರ್ಕಾರಿಆಸ್ಪತ್ರೆಯಲ್ಲಿಅಮರಮ್ಮ ಅವರಿಗೆ ಶನಿವಾರವೆ ಹೆರಿಗೆಯಾಗಿತ್ತು. ಶಿಶುವಿಗೆ ಚಿಕಿತ್ಸೆ ಅಗತ್ಯವಿದ್ದ ಕಾರಣ, ಶಿಶುವೊಂದನ್ನು ಮಾತ್ರ ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದರು.

ರ್ವಜನಿಕಆಸ್ಪತ್ರೆಯಲ್ಲಿಮೂಲ ಸೌಕರ್ಯಗಳು ಇಲ್ಲದ ಕಾರಣಕ್ಕಾಗಿ ಮಕ್ಕಳ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಮಂಗಳವಾರದಿಂದ ಶನಿವಾರ ಬೆಳಗಿನ 4 ಗಂಟೆಯ ವರೆಗೆಆಸ್ಪತ್ರೆಯಲ್ಲಿಚಿಕಿತ್ಸೆ ನೀಡಿದ ವೈದ್ಯರು ಶನಿವಾರ ಬೆಳಗಿನ ಜಾವ ಮಗು ಮೃತಪಟ್ಟಿದೆ ಘೋಷಿಸಿದ್ದರು.

ADVERTISEMENT

ವೈದ್ಯರ ಸಲಹೆಯಂತೆ ಸ್ವಗ್ರಾಮ ತುರ್ವಿಹಾಳಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡುವಾಗ ಮಗು ಬದುಕಿರುವುದು ಗೊತ್ತಾಗಿದ್ದು, ದಂಪತಿಯ ಮುಖದಲ್ಲಿ ಮತ್ತೆ ಮಂದಹಾಸ ಮೂಡಿದಂತಾಗಿದೆ.

ಸದ್ಯಕ್ಕೆ ಸಿಂಧನೂರಿನ ಇನ್ನೊಂದು ಖಾಸಗಿಆಸ್ಪತ್ರೆಯಲ್ಲಿಶಿಶುವಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.ಶಿಶುಮೃತಪಟ್ಟಿದೆ ಎಂದು ಘೋಷಿಸಿದ ವೈದ್ಯರ ಬಗ್ಗೆ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಘಟನೆ ಕುರಿತು ತುರ್ವಿಹಾಳ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಂಜುನಾಥ ಅಣಗೌಡರ್ ಅವರನ್ನು ಸಂಪರ್ಕಿಸಿದಾಗ ‘ನಮ್ಮಆಸ್ಪತ್ರೆಯಲ್ಲಿಹೆರಿಗೆ ಆಗಿರುವುದು ನಿಜ. ನಾವೇ ಹೆಚ್ಚಿನ ಚಿಕಿತ್ಸೆಗಾಗಿ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಶಿಫಾರಸು ಮಾಡಿದೇವು. ಕಾರಣಾಂತರದಿಂದ ಅವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಶನಿವಾರ ಪುನಃ ತುರ್ವಿಹಾಳ ಆಸ್ಪತ್ರೆಗೆ ಕರೆತಂದರೂ ಮಗು ಉಸಿರಾಡುತ್ತಿತ್ತು. ಸ್ವಲ್ಪ ಹೊತ್ತು ಆಮ್ಲಜನಕ ನೀಡಿ ಪುನಃ ಸರ್ಕಾರಿ ಆಸ್ಪತ್ರೆಗೆ ಶಿಫಾರಸು ಮಾಡಿದೇವೆ. ಆದರೆ ಮಗುವಿನ ಪೋಷಕರು ಖಾಸಗಿಆಸ್ಪತ್ರೆಯಲ್ಲಿಚಿಕಿತ್ಸೆ ಕೊಡಿಸುತ್ತಿದ್ದಾರೆಂದು ತಿಳಿದು ಬಂದಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.