ADVERTISEMENT

ಕೊರೊನಾ ಜಾಗೃತಿ: ರ‍್ಯಾಪ್‌ ಹಾಡು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 13:17 IST
Last Updated 22 ಏಪ್ರಿಲ್ 2020, 13:17 IST
ರಾಯಚೂರಿನ ಪತ್ರಕರ್ತ ವಿಜಯ ಜಾಗಟಗಲ್‌ ರಚಿಸಿದ ರ‍್ಯಾಪ್‌ ಶೈಲಿಯ ಕೊರೊನಾ ಜಾಗೃತಿ ಹಾಡನ್ನು ಸದರಬಜಾರ್ ಪೊಲೀಸ್ ಠಾಣೆ ಕಾನ್‌ಸ್ಟೇಬಲ್‌ ಮಂಜುನಾಥ್ ಸ್ವಾಮಿ, ಗೃಹ ರಕ್ಷಕದಳದ ಸಿಬ್ಬಂದಿ ತಿಮ್ಮಪ್ಪ ಬುಧವಾರ ಬಿಡುಗಡೆಗೊಳಿಸಿದರು
ರಾಯಚೂರಿನ ಪತ್ರಕರ್ತ ವಿಜಯ ಜಾಗಟಗಲ್‌ ರಚಿಸಿದ ರ‍್ಯಾಪ್‌ ಶೈಲಿಯ ಕೊರೊನಾ ಜಾಗೃತಿ ಹಾಡನ್ನು ಸದರಬಜಾರ್ ಪೊಲೀಸ್ ಠಾಣೆ ಕಾನ್‌ಸ್ಟೇಬಲ್‌ ಮಂಜುನಾಥ್ ಸ್ವಾಮಿ, ಗೃಹ ರಕ್ಷಕದಳದ ಸಿಬ್ಬಂದಿ ತಿಮ್ಮಪ್ಪ ಬುಧವಾರ ಬಿಡುಗಡೆಗೊಳಿಸಿದರು   

ರಾಯಚೂರು: ಪತ್ರಕರ್ತ ವಿಜಯ ಜಾಗಟಗಲ್‌ ಅವರು ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ ರ‍್ಯಾಪ್‌ ಶೈಲಿಯ ಕೊರೊನಾ ಜಾಗೃತಿ ಹಾಡನ್ನು ಸದರಬಜಾರ್ ಪೊಲೀಸ್ ಠಾಣೆ ಕಾನ್‌ಸ್ಟೇಬಲ್‌ ಮಂಜುನಾಥ್ ಸ್ವಾಮಿ ಹಾಗೂ ಗೃಹ ರಕ್ಷಕದಳದ ಸಿಬ್ಬಂದಿ ತಿಮ್ಮಪ್ಪ ಬುಧವಾರ ಬಿಡುಗಡೆಗೊಳಿಸಿದರು.‌

ಪತ್ರಕರ್ತ ಅಮರೇಶ್ ಹಾಗೂ ಪ್ರಸಾರಂಗ ವಿಭಾಗದ ವಿರೇಶ್ ಗಡ್ಡಿಮಾಲ್ ಹಾಡಿದ್ದು, ಪಬ್ಲಿಕ್ ಟಿವಿ ಕ್ಯಾಮೆರಾಮನ್ ಯಲ್ಲಾಲಿಂಗ ಹಾಗೂ ತಂಡ ಚಿತ್ರೀಕರಣ ಮಾಡಿದೆ. ಕಾರ್ತಿಕ್ ಕರೊಕೆ ಸ್ಟುಡಿಯೋದಿಂದ ನಿರ್ಮಾಣ ಮಾಡಿದ್ದು, ಕಲಾವಿದ ಸುಧಾಕರ್ ಅಸ್ಕಿಹಾಳ್ ರಿದಂ ಪ್ಯಾಡ್ ನುಡಿಸಿದ್ದಾರೆ. ಚಾರ್ಲಿ ಮೈಸೂರು ಸಂಕಲನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT