ADVERTISEMENT

ಕಮಲಾಪುರ: ಕೋವಿಡ್ ಲಸಿಕೆ ಕೊರತೆ

​ಪ್ರಜಾವಾಣಿ ವಾರ್ತೆ
Published 5 ಮೇ 2021, 14:32 IST
Last Updated 5 ಮೇ 2021, 14:32 IST
 ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ
 ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ   

ಕಮಲಾಪುರ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ಮೂರು ದಿನಗಳಿಂದ ಖಾಲಿಯಾಗಿದ್ದು, ಸಾರ್ವಜನಿಕರು ಪರದಾಡುತ್ತಿದ್ದಾರೆ.

ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಪಡೆಯಲು ಆಸ್ಪತ್ರೆಗೆ ಎಡತಾಕುತ್ತಿದ್ದಾರೆ. ವೈದ್ಯರು ಇಂದು ನಾಳೆ ಎಂದು ಮುಂದೂಡುತ್ತಲೇ ಇದ್ದಾರೆ. ಲಸಿಕೆ ಇಲ್ಲದ ಕಾರಣ ಜನರು ವಾಪಸಾಗುತ್ತಿದ್ದಾರೆ. ಕೆಲವರು ಕೋವಿಶೀಲ್ಡ, ಕೆಲವರು ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಎರಡನೇ ಡೋಸ್‍ಗೂ ಅದೆ ಲಸಿಕೆ ಹಾಕಿಸಿಕೊಳ್ಳಬೇಕಿದ್ದು ಕೋವ್ಯಾಕ್ಸಿನ್ ಅಭಾವ ಉಂಟಾಗಿದೆ. ಸದ್ಯ ಕೋವಿಶೀಲ್ಡ್ ಸಹ ಖಾಲಿಯಾಗಿದ್ದು ಸಮಸ್ಯೆಯುಂಟಾಗಿದೆ.

‘ನಾನು 5 ವಾರಗಳ ಹಿಂದೆ ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದೇನೆ. ಈ ಲಸಿಕೆ ಅಭಾವ ಇದೆ ಎಂದು ಹೇಳುತ್ತಿದ್ದಾರೆ. ನಾಲ್ಕೈದು ಬಾರಿ ಆಸ್ಪತ್ರೆಗೆ ಅಲೆದಿದ್ದೇನೆ. ಈಚೆಗೆ ಮೂರುದಿನಗಳಿಂದ ಕೋವಿಶೀಲ್ಡ ಸಹ ಇಲ್ಲ. ಕೂಡಲೇ ಸಂಬಂಧಪಟ್ಟವರು ಗಮನವಹಸಿ ಲಸಿಕೆ ಒದಗಿಸಲು ಕ್ರಮಕೈಗೊಳ್ಳಬೇಕು‘ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪರಮೇಶ್ವರ ಓಕಳಿ ಒತ್ತಾಯಿಸಿದ್ದಾರೆ.

ADVERTISEMENT

ಕಮಲಾಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನವರಿ 22 ರಿಂದ ಲಸಿಕೆ ಹಾಕುವುದು ಆರಂಭಿಸಿದ್ದು, ಇದುವರೆಗೆ 2477 ಜನ ಲಸಿಕೆ ಪಡೆದಿದ್ದಾರೆ. ಇದರಲ್ಲಿ 389 ಜನ ಎರಡನೇ ಡೋಸ್ ಲಸಿಕೆ ಒದಗಿಸಲಾಗಿದೆ. 2089 ಜನ ಮದಲನೇ ಡೋಸ್ ಪಡೆದಿದ್ದಾರೆ.

ಸೊಂತ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 1329 ಜನರಿಗೆ ಲಸಿಕೆ ಹಾಕಲಾಗಿದೆ. ಇದರಲ್ಲಿ 66 ಜನ ಎರಡನೇ ಡೋಸ್ ಪಡೆದಿದ್ದಾರೆ. ಇಲ್ಲಿ ಲಸಿಕೆ ಅಭಾವ ಉಂಟಾಗಿಲ್ಲ ಎಂದು ವೈದ್ಯಾಧಿಕಾರಿ ಕೇಶ್ವಾರ ತಿಳಿಸಿದ್ದಾರೆ.

ಡೊಂಗರಗಾಂವ: 1556, ಇದರಲ್ಲಿ ಸುಮಾರು 458, ಜನ ಎರಡನೇ ಡೋಸ್ ಪಡೆದಿದ್ದಾರೆ. ಒಂದು ದಿನ ಮಾತ್ರ ಅಭಾವ ಉಂಟಾಗಿದ್ದು ಸದ್ಯ ಲಸಿಕೆ ಲಭ್ಯ ಇದೆ ಎಂದು ಹಿರಿಯ ಆರೋಗ್ಯ ಸಹಾಯಕ ಶಮಿ ಪಟೇಲ ತಿಳಿಸಿದ್ದಾರೆ.

ಮಹಾಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2400 ಕ್ಕಿಂತ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ ಎಂದು ವೈದ್ಯಾಧಿಕಾರಿ ವಾಣಿ ಪಾಗಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.