ADVERTISEMENT

ಪಕ್ಷ ಸಂಘಟನೆಗೆ ಮುಂದಾಗಿ: ಹೂಲಗೇರಿ

ವಿರೋಧಿಗಳ ಮಾತಿಗೆ ಕಿವಿಗೊಡದೇ ಪಕ್ಷ ಸಂಘಟನೆ ಮಾಡಲು ಕರೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 7:18 IST
Last Updated 28 ಡಿಸೆಂಬರ್ 2025, 7:18 IST
ಮುದಗಲ್ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಶಾಸಕ, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಡಿ.ಎಸ್. ಹೂಲಗೇರಿ ಚಾಲನೆ ನೀಡಿದರು
ಮುದಗಲ್ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಶಾಸಕ, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಡಿ.ಎಸ್. ಹೂಲಗೇರಿ ಚಾಲನೆ ನೀಡಿದರು   

ಮುದಗಲ್: ಕಾಂಗ್ರೆಸ್ ಪಕ್ಷ ಸಂಘಟನೆಗೆ ಕಾರ್ಯಕರ್ತರು ಮುಂದಾಗಬೇಕು ಎಂದು ಲಿಂಗಸುಗೂರು ಮಾಜಿ ಶಾಸಕ ಡಿ.ಎಸ್. ಹೂಲಗೇರಿ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಅಲ್ಪಸಂಖ್ಯಾತರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‌‘ನನಗೆ ಈ ಹಿಂದೆ ಯಾವ ರೀತಿಯ ಬೆಂಬಲ ನೀಡಿದ್ದೀರೋ ಅದೇ ರೀತಿ ಮುಂದೆಯೂ ಬೆಂಬಲ ನೀಡಿ ನಿಮ್ಮೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಮಾಡುತ್ತೇನೆ. ವಿರೋಧಿ ಮಾತಿಗೆ ಕಿವಿಗೊಡಬೇಡಿ. ಪಕ್ಷದ ಬಲವರ್ಧನೆ, ಸಂಘಟನೆಗೆ ಎಲ್ಲರೂ ಮುಂದಾಗೋಣ. ನನಗೆ ಎಲ್ಲಾ ಸಮುದಾಯದ ಜನರ ಆಶೀರ್ವಾದವಿದೆ. ಅಲ್ಪ ಸಂಖ್ಯಾತ ಬಂಧುಗಳು ನನಗೆ ಬೆಂಬಲ ನೀಡಿ ಮತ್ತೊಮ್ಮೆ ಅಶೀರ್ವದಿಸಿ. ಸ್ಥಳೀಯ ಸಂಸ್ಥೆಗಳು ಚುನಾವಣೆಯ ಆಕಾಂಕ್ಷಿಗಳು ಈಗಿಂದಲೇ ಬ್ಲಾಕ್ ಅಧ್ಯಕ್ಷರಲ್ಲಿ ಅರ್ಜಿ ಸಲ್ಲಿಸಿ. ಅಭ್ಯರ್ಥಿಗಳ ಆಯ್ಕೆಗಾಗಿ ಕ್ಷೇತ್ರದಲ್ಲಿ ಬ್ಲಾಕ್‌ವಾರು ಸಮಿತಿ ರಚಿಸಿ ಆಯ್ಕೆ ಮಾಡುತ್ತೇವೆ’ ಎಂದರು.

ADVERTISEMENT

ರಾಹುಲ್ ಗಾಂಧಿ ಬ್ರಿಗೇಡ್ ರಾಜ್ಯ ಕಾರ್ಯದರ್ಶಿ ಶೇಖ ರಸೂಲ, ಅಲ್ಪ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಸೈ. ಫಯಾಜ್ ಹುಸೇನ್, ಮಾತನಾಡಿದರು. ಅಬ್ದುಲ್ ಗಫೂರ್ ಖಾನ್, ಪುರಸಭೆ ಮಾಜಿ ಉಪಾಧ್ಯಕ್ಷ ಅಜಮೀರ್ ಬೆಳ್ಳಿಕಟ್, ನ್ಯಾಮತ್ ಖಾದ್ರಿ, ಸೈಯ್ಯದ್‌ಸಾಬ, ನಾಗರಾಜ ದಫೇದಾರ, ಯುತ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖದೀರ್, ರಘುವೀರ ಮೇಗಳಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.