ಕವಿತಾಳ: ‘ಆರೋಗ್ಯ ಉಚಿತ ತಪಾಸಣೆಯ ಜೊತೆಗೆ ಕನ್ನಡಕಗಳನ್ನೂ ಉಚಿತವಾಗಿ ವಿತರಣೆ ಮಾಡುತ್ತಿರುವುದು ಶ್ಲಾಘನೀಯ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಆದನಗೌಡ ಪಾಟೀಲ ಹೇಳಿದರು.
ಎಸ್‌ಎಂಎಫ್‌ಜಿ ಗ್ರಾಮ ಶಕ್ತಿ ಮತ್ತು ಹೆಲ್ಪೇಜ್ ಇಂಡಿಯಾ ಸಂಸ್ಥೆ ವತಿಯಿಂದ ಸಮೀಪದ ವಟಗಲ್ ಗ್ರಾಮದ ಶಾರದಾ ಪಬ್ಲಿಕ್ ಸ್ಕೂಲ್‌ನಲ್ಲಿ ಸೋಮವಾರ ನಡೆದ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ವಟಗಲ್ ಗ್ರಾಮದ ಶಿವಶಂಕ್ರಮ್ಮ ಆದನಗೌಡ ಪೊಲೀಸ್ ಪಾಟೀಲ, ಅಮರಮ್ಮ ಚಂದ್ರಾಯಗೌಡ ಮತ್ತು ಸಿದ್ದಲಿಂಗಮ್ಮ ಮಲ್ಲಿಕಾರ್ಜುನಗೌಡ ಅವರ ಸ್ಮರಣಾರ್ಥ ಈಚೆಗೆ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ನೇತ್ರ ತಪಾಸಣೆ ಮಾಡಿಸಿಕೊಂಡಿದ್ದ 93 ಜನರಿಗೆ ಕನ್ನಡಕಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ’ ಎಂದು ಹೇಳಿದರು.
ಹೆಲ್ಪೇಜ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಹನುಮಂತಪ್ಪ, ಆಡಳಿತಾಧಿಕಾರಿ ಪವಿತ್ರಾ, ಶಾರದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಸ್ವಾಮಿ, ಪ್ರಾಚಾರ್ಯೆ ಮಂಜುಳಾ ಎಸ್.ಮಲಕರೆಡ್ಡಿ, ಶಿಕ್ಷಕಿಯರಾದ ಫಾತಿಮಾ ಬೇಗಂ, ಪ್ರಿಯಾಂಕ ಪಾಟೀಲ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.