ADVERTISEMENT

ಬೆಳೆ ವಿಮೆ ಪ್ರಯೋಜನ ಪಡೆದುಕೊಳ್ಳಿ: ಮಾನಸ ವೀಣಾ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 11:51 IST
Last Updated 27 ಜುಲೈ 2021, 11:51 IST
ಶಕ್ತಿನಗರ ಬಳಿಯ ದೇವಸೂಗೂರು ಗ್ರಾಮದಲ್ಲಿ ಫ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರಚಾರದ ವಾಹನಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೂಗನಗೌಡ ಅವರು ಚಾಲನೆ ನೀಡಿದರು
ಶಕ್ತಿನಗರ ಬಳಿಯ ದೇವಸೂಗೂರು ಗ್ರಾಮದಲ್ಲಿ ಫ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರಚಾರದ ವಾಹನಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೂಗನಗೌಡ ಅವರು ಚಾಲನೆ ನೀಡಿದರು   

ದೇವಸೂಗೂರು (ಶಕ್ತಿನಗರ): ‘ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕು‘ ಎಂದು ದೇವಸೂಗೂರು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಾನಸ ವೀಣಾ ಹೇಳಿದರು.

ದೇವಸೂಗೂರು ಗ್ರಾಮದಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರಚಾರದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ ಎಲ್ಲಾ ರೈತರು ಬೆಳೆ ವಿಮೆ ಮಾಡಿಸಿ ಗರಿಷ್ಠ ಪ್ರಯೋಜನ ಪಡೆಯಬೇಕು. ಹವಾಮಾನ ಆಧಾರಿತ ಬೆಳೆ ವಿಮೆ ವ್ಯಾಪ್ತಿಗೆ ಒಳಪಡಲು ರೈತರು ಹೆಚ್ಚು ಆಸಕ್ತಿ ತೋರಬೇಕು. ಬೆಳೆಗಳ ವಿಮಾ ಪ್ರಯೋಜನ ಪಡೆಯಬೇಕು‘ ಎಂದು ಮನವಿ ಮಾಡಿದರು.

ದೇವಸೂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೂಗನಗೌಡ, ಸೂಗೂರೇಶ್ವರ ದೇವಸ್ಥಾನದ ಕಾರ್ಯನಿರ್ವಹಕಾಧಿಕಾರಿ ಪಿ.ಶಾಂತಮ್ಮ, ದೇವಸೂಗೂರು ರೈತ ಸಂಪರ್ಕ ಕೇಂದ್ರದ ಸಹಾಯಕ ಅಧಿಕಾರಿ ಸಂಜಯಕುಮಾರ, ಪ್ರಮುಖರಾದ ಬಸವರಾಜಗೌಡ ಪೊಲೀಸ್ ಪಾಟೀಲ್, ವೆಂಕಟೇಶ, ಪ್ರಕಾಶಯ್ಯ ನಂದಿ, ಸತೀಶಗೌಡ ದೊಡ್ಡಿ, ಜೀತೇಂದ್ರ, ಸುರೇಶ ಬಡಿಗೇರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.