ADVERTISEMENT

ಹಟ್ಟಿ ಚಿನ್ನದ ಗಣಿ: ಹತ್ತಿ ಖರೀದಿ ಕೇಂದ್ರವಿಲ್ಲದೆ ರೈತರ ಪರದಾಟ

ಅಮರೇಶ ನಾಯಕ
Published 30 ಅಕ್ಟೋಬರ್ 2025, 6:58 IST
Last Updated 30 ಅಕ್ಟೋಬರ್ 2025, 6:58 IST
ಹಟ್ಟಿ ಚಿನ್ನದ ಗಣಿ ಸಮೀಪದ‌ ಗೌಡೂರು ಗ್ರಾಮದ ರೈತ ಹತ್ತಿ ಖರೀದಿ ಕೇಂದ್ರವಿಲ್ಲದೆ ಸಂಗ್ರಹಿಸಿ ಇಟ್ಟಿರುವುದು.
ಹಟ್ಟಿ ಚಿನ್ನದ ಗಣಿ ಸಮೀಪದ‌ ಗೌಡೂರು ಗ್ರಾಮದ ರೈತ ಹತ್ತಿ ಖರೀದಿ ಕೇಂದ್ರವಿಲ್ಲದೆ ಸಂಗ್ರಹಿಸಿ ಇಟ್ಟಿರುವುದು.   

ಹಟ್ಟಿ ಚಿನ್ನದ ಗಣಿ: ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ಹತ್ತಿ ಖರೀದಿ ಕೇಂದ್ರ ಆರಂಭವಾಗದೆ ಇರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಟ್ಟಿ ಸುತ್ತಮುತ್ತಲಿನ ಗ್ರಾಮಗಳಾದ,‌ ಮೇದಿನಾಪೂರ, ಕೋಠಾ, ನಿಲೋಗಲ್, ವೀರಾಪೂರ, ಯಲಗಟ್ಟಾ, ಗುರುಗುಂಟಾ, ಪೈದೊಡ್ಡಿ, ಯರಜಂತಿ, ಮಾಚನೂರು, ಬಂಡೆಭಾವಿ, ಗೌಡೂರು, ರೋಡಲಬಂಡ, ಆನ್ವರಿ, ನಗನೂರು, ಹಿರೆಸೆಸರೂರು ಹಾಗೂ ಇತರೆ ಗ್ರಾಮಗಳಲ್ಲಿ ಈ ಭಾರಿ ಅತಿ ಹೆಚ್ಚಾಗಿ 1,470 ಹೆಕ್ಟೇರ್ ಪ್ರದೇಶದ ಹತ್ತಿ ಬೆಳೆಯನ್ನು ಬೆಳೆದಿದ್ದು, ಕಟಾವು, ಕೂಡ ಮಾಡಲಾಗಿದೆ. ಆದರೆ ಖರೀದಿ ಕೇಂದ್ರಗಳು ಇಲ್ಲದೆ ಆರಂಭವಾಗದೆ ಇರುವುದರಿಂದ ರೈತರನ್ನು ಚಿಂತೆಗಿಡುಮಾಡಿದೆ.

ರೈತರು ಸಾಲ ಸೂಲ ಮಾಡಿ, ಬಿತ್ತನೆ ಮಾಡಿದ್ದಾರೆ. ಈ ಭಾರಿ ಅತಿ ಹೆಚ್ಚಿನ ಮಳೆಯಾಗಿ ಬೆಳೆಗಳು ಹಾಳಾಗಿ ರೈತರನ್ನು ಚಿಂತೆಗೆ ಈಡುಮಾಡಿತ್ತು, ಸರ್ಕಾರ ಹತ್ತಿ ಖರೀದಿ ಕೇಂದ್ರ ಆರಂಭಿಸಿದರೆ, ರೈತರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಈ ಭಾಗದ ರೈತರು.

ADVERTISEMENT

ಜಿಲ್ಲೆಯಲ್ಲಿಯೆ ಕೇವಲ 5 ಹತ್ತಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಲಿಂಗಸುಗೂರು ತಾಲ್ಲೂಕಿನಲ್ಲಿ ಆರಂಭವಾಗಿಲ್ಲ. ದೇವದುರ್ಗ, ಸಿರವಾರ, ರಾಯಚೂರು ಜಿಲ್ಲೆಗೆ ತೆರಳಿ ಮಾರಾಟ ಮಾಡಬೇಕಾಗಿದೆ. ಅಲ್ಲಿಗೆ ಹೋದರೆ, ಆನ್‌ಲೈನ್‌ ಮೂಲಕ ಮೊದಲು ಅರ್ಜಿ ಸಲ್ಲಿಸಿದ ನಂತರ ಮಾರಾಟಕ್ಕೆ ಅನವು ಮಾಡಿಕೊಡಲಾಗಿದೆ. ಇದರಿಂದ ರೈತರಿಗೆ ಬಹಳ ತೊಂದರೆಯಾಗಿದೆ ಎನ್ನುತ್ತಾರೆ ರೈತ ಮಲ್ಲಿಕಾರ್ಜುನ.

ತಾಲ್ಲೂಕು ಆಡಳಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ನೆರವಿಗೆ ದಾವಿಸಿ, ರೈತರ ಸಮಸ್ಯೆಗಳನ್ನು ಆಲಿಸಬೇಕು ಎನ್ನುವುದು ರೈತರ ಒತ್ತಾಯವಾಗಿದೆ.

ಹತ್ತಿ ಖರೀದಿ ಕೇಂದ್ರ ಆರಂಭವಾಗದಿರುವುದಕ್ಕೆ ಅಧಿಕಾರಿಗಳಿಂದ ಮಾಹಿತಿ ಪಡೆದು ರೈತರ ಸಮಸ್ಯೆ ಬಗೆಹರಿಸಲಾಗುವುದು
ಮಾನಪ್ಪ ಡಿ. ವಜ್ಜಲ್ ಶಾಸಕ ಲಿಂಗಸುಗೂರು
ಗುರಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ಹತ್ತಿ ಖರೀದಿ ಕೇಂದ್ರ ಆರಂಭಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ
ಬಸವರಾಜ ರಾಜ್ಯ ರೈತ ಸಂಘ ಹಸಿರು ಸೇನೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.