ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ರಸ್ತೆಯ ದೂಳು ನಿಯಂತ್ರಣಕ್ಕೆ‌ ನೀರು ಸಿಂಪಡಣೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 7:41 IST
Last Updated 24 ನವೆಂಬರ್ 2025, 7:41 IST
ಹಟ್ಟಿ ಪಟ್ಟಣದಲ್ಲಿ ಮುಖ್ಯ ರಸ್ತೆಗೆ ಜಲ ಜೀವನ ಮಿಷನ್ ಯೋಜನೆಯ ಅಧಿಕಾರಿಗಳು ದೂಳು ನಿಯಂತ್ರಣಕ್ಕೆ ಟ್ಯಾಂಕರ್ ಮೂಲಕ ನೀರು ಸಿಂಪಡಣೆ ಮಾಡುತ್ತಿರುವುದು
ಹಟ್ಟಿ ಪಟ್ಟಣದಲ್ಲಿ ಮುಖ್ಯ ರಸ್ತೆಗೆ ಜಲ ಜೀವನ ಮಿಷನ್ ಯೋಜನೆಯ ಅಧಿಕಾರಿಗಳು ದೂಳು ನಿಯಂತ್ರಣಕ್ಕೆ ಟ್ಯಾಂಕರ್ ಮೂಲಕ ನೀರು ಸಿಂಪಡಣೆ ಮಾಡುತ್ತಿರುವುದು   

ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣದಲ್ಲಿ ಜಲಜೀವನ ಮಿಷನ್ ಯೋಜನೆಯ ಅಧಿಕಾರಿಗಳು ದೂಳು ನಿಯಂತ್ರಣಕ್ಕೆ ಶನಿವಾರದಿಂದ ಮುಖ್ಯರಸ್ತೆಗೆ ಟ್ಯಾಂಕರ್ ಮೂಲಕ ನೀರು ಸಿಂಪಡಣೆ ಮಾಡುತ್ತಿದ್ದಾರೆ.

ಪಟ್ಟಣದ ಮುಖ್ಯ ರಸ್ತೆಯನ್ನು ಅಗೆದು ಜೆಜೆಎಂ ಕಾಮಗಾರಿಗೆ ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ಇದರಿಂದ ನಿತ್ಯ ಧೂಳಿನ ಸಮಸ್ಯೆಯಿಂದಾಗಿ ಜನ ತೊಂದರೆ ಅನುಭವಿಸುತ್ತಿದ್ದರು. ಈ ಕುರಿತು ನ.18ರಂದು ‘ಪ್ರಜಾವಾಣಿ’ಯಲ್ಲಿ ‘ರಸ್ತೆ ‌ನುಗ್ಗಿದ ಜಲ ಜೀವನ ಮಿಷನ್ ಯೋಜನೆ’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ವರದಿಗೆ ಎಚ್ಚತ್ತ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಜಲಜೀವನ ಮಿಷನ್ ಅಧಿಕಾರಿಗಳು ದೂಳು ನಿಯಂತ್ರಣಕ್ಕೆ ರಸ್ತೆಗೆ ನೀರು ಸಿಂಪಡಣೆಗೆ ಮುಂದಾಗಿದ್ದಾರೆ. ಜಲ ಜೀವನ ಮೀಷನ್ ಯೋಜನೆ ಅಧಿಕಾರಿಗಳಿಗೆ ಮುಖ್ಯಾಧಿಕಾರಿ ಜಗನಾಥ ಜೋಷಿ ನಿತ್ಯ‌ ನೀರು ಹಾಕಿ ಸಮಸ್ಯೆ ಆಗದಂತೆ‌ ನೋಡಿಕೊಳ್ಳಿ‌ ಎಂದು ಎಚ್ಚರಿಕೆ ‌ನೀಡಿದ್ದಾರೆ.

ADVERTISEMENT

‘ರಸ್ತೆ ಅಗೆದಿದ್ದರಿಂದ ದೂಳಿನಿಂದ ಮೂಗು ಮುಚ್ಚಿಕೊಂಡು ಸಂಚಾರ ಮಾಡಬೇಕಾಗಿತ್ತು. ವರದಿ ಬಳಿಕ ರಸ್ತೆಗೆ ನೀರು ಸಿಂಪಡಣೆ ಮಾಡುತ್ತಿದ್ದಾರೆ’ ಎಂದು ಹಿಂದೂ ನವಭಾರತ ದಲಿತ ಸೇನೆಯ ಅಧ್ಯಕ್ಷ ವಿನೋದ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.