ADVERTISEMENT

ರಾಯಚೂರು: ಕೃಷ್ಣಾ ಪ್ರವಾಹ ಏರಿಕೆ, ಹೂವಿನಹೆಡಗಿ ಸೇತುವೆ ಮುಳುಗಡೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 8:21 IST
Last Updated 24 ಜುಲೈ 2021, 8:21 IST
ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆ ಶನಿವಾರ ಮುಳುಗಡೆಯಾಗಿದೆ.
ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆ ಶನಿವಾರ ಮುಳುಗಡೆಯಾಗಿದೆ.   

ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ 3.5 ಲಕ್ಷ ಕ್ಯುಸೆಕ್ ಅಡಿ ನೀರು ಹೊರಬಿಡುತ್ತಿದ್ದು, ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆ ಶನಿವಾರ ಮುಳುಗಡೆಯಾಗಿದೆ.

ಮುನ್ನೆಚ್ರಿಕೆ ವಹಿಸಿ ನಿನ್ನೆ ರಾತ್ರಿಯಿಂದಲೇ‌ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಕಲಬುರ್ಗಿ- ರಾಯಚೂರು ಮಧ್ಯೆ ಸರ್ಕಾರಿ ಬಸ್ ಗಳು ಸಂಚರಿಸುವ ಪ್ರಮುಖ ಮಾರ್ಗ ಇದಾಗಿತ್ತು. ಇದೀಗ 40 ಕಿಲೋ ಮೀಟರ್ ಸುತ್ತುವರಿದು ತಿಂಥಣಿ ಬ್ರಿಡ್ಜ್ ಮೂಲಕ ಕಲಬುರ್ಗಿಯಿಂದ ರಾಯಚೂರಿಗೆ ಸಂಚರಿಸಬೇಕಿದೆ.

ಖಾಸಗಿ ವಾಹನಗಳು ಕಲಬುರ್ಗಿಯಿಂದ ಯಾದಗಿರಿ, ಶಕ್ತಿನಗರ ಮೂಲಕ ರಾಯಚೂರು ತಲುಪಲು ಅನುಕೂಲವಿದೆ. ಆದರೆ, ಸರ್ಕಾರಿ ಬಸ್ ಗಳು ಈ ಮಾರ್ಗದಲ್ಲಿ ಹೆಚ್ಚವರಿ ಸಂಚರಿಸಲು ತೆಲಂಗಾಣ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ.

ADVERTISEMENT

ಶಕ್ತಿನಗರ ಪಕ್ಕದ ದೇವುಸುಗೂರು ಸೇತುವೆ ಎರಡು ರಾಜ್ಯಗಳ ಗಡಿಭಾಗದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.