ADVERTISEMENT

ರಾಯಚೂರು: ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ, ಬಳೂರಗಿಗೆ ಸಂದ ಗೌರವ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 15:32 IST
Last Updated 30 ಅಕ್ಟೋಬರ್ 2022, 15:32 IST
ಡಾ.ಡಿ.ಆರ್.ಬಳೂರಗಿ
ಡಾ.ಡಿ.ಆರ್.ಬಳೂರಗಿ   

ರಾಯಚೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಂಸ್ಥಾಪಕರಲ್ಲಿ ಒಬ್ಬರಾದ ಹಾಗೂ ವಿಜ್ಞಾನವನ್ನು ಜನಪ್ರಿಯ ಮಾಡಲು ತಮ್ಮದೇ ಆದ ಕಾಣಿಕೆ ನೀಡಿರುವ ಡಾ.ಡಿ.ಆರ್.ಬಳೂರಗಿ ಅವರಿಗೆ ಈ‌ ವರ್ಷ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿರುವುದು ಅವರ ಅಪಾರ ಶಿಷ್ಯಬಳಗಕ್ಕೆ ಹರ್ಷ ಮೂಡಿಸಿದೆ.

ರಾಯಚೂರಿನ ಎಲ್‌ವಿಡಿ ಪದವಿ ಕಾಲೇಜಿನಲ್ಲಿ 33 ವರ್ಷ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, 2001 ರಲ್ಲಿ ನಿವೃತ್ತರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ವಿಜ್ಞಾನ–ತಂತ್ರಜ್ಞಾನ ಕ್ಷೇತ್ರದ ಸಾಧಕರ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದಕ್ಕೆ ಅವರ ಶಿಷ್ಯ ಬಳಗವು ಹರ್ಷಗೊಂಡಿದೆ. ವಿಜ್ಞಾನ ವಿಷಯವನ್ನು ಇಂಗ್ಲಿಷ್‌ನಿಂದ ಕನ್ನಡ ಅರ್ಥ ಮಾಡಿಸುವ ಕೆಲಸವನ್ನು ಡಾ.ಡಿ.ಆರ್‌.ಬಳೂರಗಿ ಅವರು ಮಾಡಿದ್ದಾರೆ. ಮಾಸಪತ್ರಿಕೆಗಳು, ವಾರಪತ್ರಿಕೆಗಳಲ್ಲಿ ಹಾಗೂ ವಿಜ್ಞಾನ ಪರಿಷತ್‌ನ ಬಾಲ ವಿಜ್ಞಾನ ನಿಯತಕಾಲಿಕೆಯಲ್ಲಿ ಸಾಕಷ್ಟು ಲೇಖನಗಳು ಪ್ರಕಟವಾಗಿವೆ.

*
ಶಸ್ತಿಗಾಗಿ ಹಪಿಹಪಿಸುವ ಕಾಲ ಮುಗಿದುಹೋಗಿದೆ. ರಾಜ್ಯ ಸರ್ಕಾರವು ನನಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದಕ್ಕೆ ಸಂತೋಷವಾಗಿದೆ.
– ಡಾ.ಡಿ.ಆರ್‌.ಬಳೂರಗಿ, ನಿವೃತ್ತ ಪ್ರಾಧ್ಯಾಪಕರು, ಎಲ್‌ವಿಡಿ ಪದವಿ ಕಾಲೇಜು, ರಾಯಚೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT