ADVERTISEMENT

Raghavendra Swamy Aradhana Mahotsava: ಆ.8ರಿಂದ ರಾಯರ ಆರಾಧನಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 15:31 IST
Last Updated 31 ಜುಲೈ 2025, 15:31 IST
ಶ್ರೀ ರಾಘವೇಂದ್ರ ಸ್ವಾಮಿಗಳು
ಶ್ರೀ ರಾಘವೇಂದ್ರ ಸ್ವಾಮಿಗಳು   

ರಾಯಚೂರು: ಮಂತ್ರಾಲಯ ಮಠದಲ್ಲಿ ಆಗಸ್ಟ್‌ 8ರಿಂದ 14ರವರೆಗೆ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವ ನಡೆಯಲಿದೆ.

ಆ.8ರಿಂದ ಒಂದು ವಾರ ನಿತ್ಯ ಬೆಳಿಗ್ಗೆ ಧಾರ್ಮಿಕ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. 8ರಸಂಜೆ 6 ಗಂಟೆಗೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. 

ಆ. 9ರಂದು ಬೆಳಿಗ್ಗೆ 8.15ಕ್ಕೆ ದೇವಸ್ಥಾನದ ಅಧಿಕಾರಿಗಳು ಶ್ರೀನಿವಾಸದೇವರ ವಸ್ತ್ರ ಸಮರ್ಪಿಸುವರು. ರಾತ್ರಿ 8ಕ್ಕೆ ಶಾಖೋತ್ಸವ ರಜತ ಮಂಟಪೋತ್ಸವ ನಡೆಯಲಿದೆ. ಆ.10ರಂದು ಪೂರ್ವಾ ಆರಾಧನೆ, ಆ.11ರಂದು ಮಧ್ಯಾರಾಧನೆ, ಆ.12 ರಂದು ಉತ್ತರ ಆರಾಧನೆ ನಡೆಯಲಿವೆ. 12ರಂದು ಮೂಲ ಬೃಂದಾವನಕ್ಕೆ ವಜ್ರಕವಚ ಸಮರ್ಪಣೆ, ಬೆಳಿಗ್ಗೆ 10ಗಂಟೆಗೆ ಮಹಾರಥೋತ್ಸವ ಜರುಗಲಿವೆ.

ADVERTISEMENT

ಆ.13ರಂದು ಅಶ್ವ ವಾಹನೋತ್ಸವ ಹಾಗೂ ಶ್ರೀಸುಗಣೇಂದ್ರ ತೀರ್ಥರ ಆರಾಧನೆ, ಆ.14ರಂದು ರಾತ್ರಿ 8 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.