ADVERTISEMENT

‘ಸಿರವಾರ’ ಸಿಂಧನೂರು ಜಿಲ್ಲೆಗೆ ಸೇರ್ಪಡೆಗೆ ವಿರೋಧಿಸಿ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 8:28 IST
Last Updated 24 ಫೆಬ್ರುವರಿ 2026, 8:28 IST
ಸಿರವಾರದಲ್ಲಿ ಸೋಮವಾರ ಸಿರವಾರ ತಾಲ್ಲೂಕು ಸೇರ್ಪಡೆ ವಿರೋಧಿಸಿ ತಾಲ್ಲೂಕು ಹೋರಾಟ ಸಮಿತಿ ನೇತೃತ್ವದಲ್ಲಿ ಈಶ್ವರ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿಯವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಲಾಯಿತು
ಸಿರವಾರದಲ್ಲಿ ಸೋಮವಾರ ಸಿರವಾರ ತಾಲ್ಲೂಕು ಸೇರ್ಪಡೆ ವಿರೋಧಿಸಿ ತಾಲ್ಲೂಕು ಹೋರಾಟ ಸಮಿತಿ ನೇತೃತ್ವದಲ್ಲಿ ಈಶ್ವರ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿಯವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಲಾಯಿತು   

ಸಿರವಾರ: ಸಿರವಾರ ತಾಲ್ಲೂಕು ನೂತನ ಜಿಲ್ಲೆಯಾಗಿ ಘೋಷಣೆಯಾಗುವ ನಿರೀಕ್ಷೆಯಲ್ಲಿರುವ ಸಿಂಧನೂರುಗೆ ಸೇರ್ಪಡೆಗೊಳಿಸುವ ಪ್ರಯತ್ನಗಳು ನಡೆದಿದ್ದು, ಯಾವುದೇ ಕಾರಣಕ್ಕೂ ತಾಲ್ಲೂಕನ್ನು ರಾಯಚೂರು ಜಿಲ್ಲೆಯಿಂದ ಕೈಬಿಡಬಾರದು ಎಂದು ಒತ್ತಾಯಿಸಿ ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ್ ಅವರಿಗೆ ಸಿರವಾರ ತಾಲ್ಲೂಕು ಹೋರಾಟ ಸಮಿತಿ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.

ರಾಜ್ಯಪಾಲರಿಗೆ ಬರೆದ ಮನವಿ ಪತ್ರದಲ್ಲಿ ಸಿರವಾರ ತಾಲ್ಲೂಕನ್ನು ಸಿಂಧನೂರು ಜಿಲ್ಲೆಗೆ ಸೇರ್ಪಡೆ ಮಾಡುವುದರಿಂದ ಬಹಳಷ್ಟು ಸಮಸ್ಯೆಗಳನ್ನು ಇಲ್ಲಿನ ನಾಗರಿಕರು ಎದುರಿಸಬೇಕಾಗುತ್ತದೆ. ಇದು ಅವೈಜ್ಞಾನಿಕ ನಿರ್ಧಾರವಾಗಿದ್ದು, ತಕ್ಷಣವೇ ಇದನ್ನು ಕೈಬಿಟ್ಟು, ಯಥಾರೀತಿ ರಾಯಚೂರು ಜಿಲ್ಲೆಯಲ್ಲಿಯೇ ಮುಂದುವರಿಸಬೇಕು. ಸಿರವಾರದಿಂದ ಸಿಂಧನೂರು 70 ಕಿ ಮೀ ಅಂತರವಿದ್ದು, ಇದು ಪ್ರತಿಯೊಂದು ಕೆಲಸ ಕಾರ್ಯಗಳಿಗೂ ತೀವ್ರ ತೊಂದರೆ ಉಂಟಾಗುತ್ತದೆ. ಆದ್ದರಿಂದ ಈ ನಿರ್ಧಾರ ಕೈ ಬಿಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಯಿತು.

ಮನವಿ ಸಲ್ಲಿಕೆಗೂ ಮೊದಲು ಪಟ್ಟಣದ ಈಶ್ವರ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿಯವರೆಗೆ ನೂರಾರು ಮುಖಂಡರು ಪಾದಯಾತ್ರೆ ಮೂಲಕ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.

ADVERTISEMENT

ತಹಶೀಲ್ದಾರ್ ಅಶೋಕ ಪವಾರ್, ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಜೆ.ದೇವರಾಜಗೌಡ, ಮುಖಂಡರಾದ ವೈ.ಶರಣಯ್ಯ ನಾಯಕ, ಮಹಾಂತೇಶ ಪಾಟೀಲ ಅತ್ತನೂರು, ಜೆ.ಶರಣಪ್ಪಗೌಡ, ಚುಕ್ಕಿ ಸೂಗಪ್ಪ ಸಾಹುಕಾರ, ಆರ್.ಕೆ.ಅಮರೇಶಪ್ಪ ಸಾಹುಕಾರ, ಎನ್.ಉದಯಕುಮಾರ, ಟಿ.ಮಲ್ಲಿಕಾರ್ಜುನ ಪಾಟೀಲ ಬಲ್ಲಟಗಿ, ಅರುಣ ಕುಮಾರ ಪಾಟೀಲ ಮಲ್ಲಟ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಅಯ್ಯನಗೌಡ ಏರಡ್ಡಿ, ಜಿ.ಲೋಕರಡ್ಡಿ, ಸಿದ್ಧರಾಮಯ್ಯ ಸ್ವಾಮಿ, ಆದರ್ಶ ನಾಯಕ, ವಿಜಯಲಕ್ಷ್ಮಿ ಆದೆಪ್ಪ, ಜಿ.ವೀರೇಶ, ಚನ್ನಪ್ಪ ಚನ್ನೂರ, ಪ.ಪಂ.ಅಧ್ಯಕ್ಷ ಹಾಜಿ ಚೌದ್ರಿ, ಕಲ್ಲೂರು ಬಸವರಾಜ ನಾಯಕ, ಚಂದ್ರಶೇಖರಯ್ಯ ಹಿರೇಮಠ, ರಮೇಶ ದರ್ಶನಕರ್, ಟಿ.ಬಸವರಾಜ, ಹರಳಪ್ಪ ಯದ್ದಲದಿನ್ನಿ, ಬಡ್ಡ ಹನುಮಂತ, ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು, ರೈತಪರ ಸಂಘಟನೆಗಳು, ಕಾರ್ಮಿಕಪರ ಸಂಘಟನೆಗಳು, ಮಹಿಳಾ ಪರ ಸಂಘಟನೆಗಳು, ದಲಿತಪರ ಸಂಘಟನೆಗಳಿ ಸೇರಿದಂತೆ ಹಲವಾರು ಸಂಘಟನೆಗಳು ಪದಾಧಿಕಾರಿಗಳು, ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.