ದೇವದುರ್ಗ: ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕಾಮಗಾರಿಗಳಲ್ಲಿ ನಡೆದ ಅಕ್ರಮ ಕುರಿತು ರಾಜ್ಯ ಸಾಮಾಜಿಕ ಲೆಕ್ಕಪರಿಶೋಧನಾ ಸಮಿತಿ ನೀಡಿದ ವರದಿ ಆಧರಿಸಿ ತಾಲ್ಲೂಕು ಪಂಚಾಯಿತಿಯ 19 ಹೊರಗುತ್ತಿಗೆ ನೌಕರರನ್ನು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಜುಲೈ 21ರಂದು ಸೇವೆಯಿಂದ ಬಿಡುಗಡೆ ಮಾಡಿದ್ದಾರೆ.
ತಾಲ್ಲೂಕಿನ ನರೇಗಾ ಯೋಜನೆಯಡಿ 2020-21, 2021-22, 2022-23ರವರೆಗೆ ನಡೆದ ಕಾಮಗಾರಿಗಳಲ್ಲಿ ಕಾಮಗಾರಿ ಅನುಷ್ಠಾನಗೊಳಿಸದೆ ₹83.09 ಲಕ್ಷ ಪಾವತಿ, ಕೆಟಿಪಿಪಿ ನಿಯಮ ಉಲ್ಲಂಘಿಸಿ ಒಂದೇ ವೇಂಡರ್‌ಗೆ ₹103.35 ಕೋಟಿ ಪಾವತಿ, ವೈಯಕ್ತಿಕ ಕಾಮಗಾರಿ ಕೈಗೊಂಡ ಫಲಾನುಭವಿಗಳಿಗೆ ಪಾವತಿಸದ ₹3.36 ಕೋಟಿ, ಅಳತೆ ಪುಸ್ತಕ ದಾಖಲಿಸದೆ ₹35.22ಕೋಟಿ, ಚೇಕ್ ಮೇಜರ್ ಮೆಂಟ್ ಮಾಡದೆ ₹118.77 ಕೋಟಿ ಹಣ ಪಾವತಿ, ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ₹11.29 ಕೋಟಿ ಹಣ ದುರುಪಯೋಗಕ್ಕೆ ತಾಂತ್ರಿಕ ಸಿಬ್ಬಂದಿ ಸಹಕರಿಸಿ ಹಣ ದುರ್ಬಳಕೆ ಮಾಡಿಕೊಂಡ ಆದರದ ಮೇಲೆ ಈ ಸಿಬ್ಬಂದಿಯ ಸೇವೆಯನ್ನು ರದ್ದುಗೊಳಿಸಿ ಮಾನವ ಸಂಪನ್ಮೂಲ ಒದಗಿಸಿದ ಸಂಸ್ಥೆಗೆ ಸೇವೆಯಿಂದ ಬಿಡುಗಡೆ ಮಾಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಆದೇಶ ಮಾಡಿದ್ದಾರೆ.
2023 ನವೆಂಬರ್‌ನಲ್ಲಿ ತಾಲ್ಲೂಕಿನ 33 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಿದ್ದ 33 ಪಿಡಿಒಗಳು, ಇಒ, ಮತ್ತು ಎಡಿ (ಗ್ರಾ ಉ) ಅಮಾನತು ಮಾಡಿ ಇಒ ಮತ್ತು ಎಡಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.