ADVERTISEMENT

ಕವಿತಾಳ: ಸುಭಾಷ್‌ ಚಂದ್ರ ಬೋಸ್‌ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 15:54 IST
Last Updated 23 ಜನವರಿ 2024, 15:54 IST
ಕವಿತಾಳ ಸಮೀಪದ ವಟಗಲ್‌ ಗ್ರಾಮದಲ್ಲಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜಯಂತಿ ಆಚರಿಸಲಾಯಿತು
ಕವಿತಾಳ ಸಮೀಪದ ವಟಗಲ್‌ ಗ್ರಾಮದಲ್ಲಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜಯಂತಿ ಆಚರಿಸಲಾಯಿತು   

ಕವಿತಾಳ: ‘ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ತತ್ವಾದರ್ಶಗಳು ಯುವಜನತೆಗೆ ಸದಾ ಪ್ರೇರಣೆ ನೀಡುತ್ತವೆ’ ಎಂದು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ನವ ಯುವಕ ಸಂಘದ ಅಧ್ಯಕ್ಷ ಶಿವಕುಮಾರ ಪಾಟೀಲ ವಟಗಲ್‌ ಹೇಳಿದರು.

ಸಮೀಪದ ವಟಗಲ್‌ ಗ್ರಾಮದಲ್ಲಿ ಮಂಗಳವಾರ ನಡೆದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜಯಂತಿ ಸಮಾರಂಭದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

‘ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ನೇತಾಜಿ ಅವರ ದೂರದೃಷ್ಟಿ, ರಾಜಕೀಯ ಅನುಭವ ಮತ್ತು ಯುವಕರ ಬಗ್ಗೆ ಅವರು ಹೊಂದಿದ್ದ ದೃಷ್ಟಿಕೋನ ವಿಶಿಷ್ಟವಾದದ್ದು’ ಎಂದು ಹೇಳಿದರು.

ADVERTISEMENT

ಯುವಕ ಸಂಘದ ಪದಾಧಿಕಾರಿಗಳಾದ ವಿಜಯ ಪಾಟೀಲ, ಶಿವನಗೌಡ ಮಾಲಿ ಪಾಟೀಲ, ಕೆ.ಸುಭಾಷ್‌ ಅಮರೇಶ ಟೈಗರ್, ಆದೇಶ, ಅಮರೇಶ ಬಡಿಗೇರ, ಮುಖಂಡರಾದ ಮಹಾಂತೇಶ ಸ್ವಾಮಿ, ಆದನಗೌಡ, ಭರತ್, ರಾಮರೆಡ್ಡಿ, ಬಸವರಾಜ, ದೇವರಾಜ, ಬಸವಲಿಂಗಪ್ಪ, ಅಕ್ಷಯ್, ಶಿವರಾಜ, ಭೀಮಪ್ಪ ನಾಯಕ, ಬಸವರಾಜ ಕುರುಬರ ಮತ್ತು ಕರಿಯಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.