ADVERTISEMENT

ರಾಯಚೂರಿನಲ್ಲಿ ಮದ್ಯದಂಗಡಿ ಎದುರು ಜನವೋ ಜನ..

​ಪ್ರಜಾವಾಣಿ ವಾರ್ತೆ
Published 31 ಮೇ 2021, 6:58 IST
Last Updated 31 ಮೇ 2021, 6:58 IST
ಖರೀದಿಗಾಗಿ ಮದ್ಯಪ್ರಿಯರ ಸರದಿ
ಖರೀದಿಗಾಗಿ ಮದ್ಯಪ್ರಿಯರ ಸರದಿ   

ರಾಯಚೂರು: ಮೂರು ದಿನಗಳ ನಂತರ ಸೋಮವಾರ ಲಾಕ್‌ಡೌನ್ ಸಡಿಲಿಕೆ ಮಾಡಿದ್ದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ದಿನಸಿ ಮತ್ತು ತರಕಾರಿ ಖರೀದಿಗೆ ಅವಕಾಶ ಮಾಡಲಾಗಿದೆ. ಇದೇ ವೇಳೆ ಮದ್ಯದಂಗಡಿಗಳಿಗೂ ಅವಕಾಶ ನೀಡಿದ್ದುಖರೀದಿಗಾಗಿ ಮದ್ಯಪ್ರಿಯರು ಸರದಿ ನಿಂತಿದ್ದಾರೆ.

ರಾಯಚೂರು ನಗರದ ಗಂಜ್ ಸರ್ಕಲ್, ಸ್ಟೇಷನ್ ಸರ್ಕಲ್ ಹಾಗೂ ಗೋಶಾಲಾ ರಸ್ತೆಯಲ್ಲಿರುವ ಎಂಎಸ್‌ಪಿಎಲ್ ಎದುರು ಅತಿಹೆಚ್ಚಿನ ಸಂಖ್ಯೆಯಲ್ಲಿ ಮದ್ಯಪ್ರಿಯರು ನಿಂತಿದ್ದಾರೆ. ಬೆಳಿಗ್ಗೆ ಅಂಗಡಿ ಬಾಗಿಲು ತೆರೆಯುವ ಮೊದಲೇ ಸರದಿ ಆರಂಭವಾಗಿತ್ತು.

ಎಂಆರ್‌ಪಿ ದರದಲ್ಲಿ ಮದ್ಯ ಮಾರಾಟಮಾಡುವ ಸಿಎಲ್-2 ಅಂಗಡಿಗಳಿಗೂ ಪಾರ್ಸಲ್ ನೀಡುವುದಕ್ಕೆ ಅವಕಾಶ ನೀಡಲಾಗಿದೆ. ಅಲ್ಲಿಯೂ ಜನರು ಸರದಿ ನಿಂತು ಖರೀದಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.