ರಾಯಚೂರು: ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿರುವುದನ್ನು ತೀವ್ರವಾಗಿ ಖಂಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ, ‘ದಲಿತ ಸಮುದಾಯವನ್ನು ಕೆಣಕಿದರೆ ಬೀದಿಯಲ್ಲಿ ತಿರುಗಾಡುವುದು ಕಷ್ಟವಾದಿತು’ ಎಂದು ಎಚ್ಚರಿಸಿದ್ದಾರೆ.
‘ಬೆದರಿಕೆಗೆ ಯಾವ ರೀತಿ ಉತ್ತರಿಸಬೇಕು ಎನ್ನುವುದು ಚೆನ್ನಾಗಿ ಗೊತ್ತಿದೆ. ದಲಿತರು ಬೀದಿಗಿಳಿದರೆ, ನೀವು ಬೀದಿಯಲ್ಲಿ ತಿರುಗಾಡುವುದು ಕಷ್ಟವಾಗಲಿದೆ’ ಎಂದು ಹೇಳಿದ್ದಾರೆ.
‘ನೂರು ವರ್ಷದ ಪಥ ಸಂಚಲನದಿಂದ ದೇಶಕ್ಕೆ ಹಾಗೂ ಸಮಾಜಕ್ಕೆ ಏನು ಲಾಭವಾಗಿದೆ. ಅದರಿಂದ ಯಾವ ಬದಲಾವಣೆ ಆಗಿದೆ ಎನ್ನುವುದು ಜನರಿಗೆ ತಿಳಿದಿದೆ. ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಿಸಿರುವುದು ಸ್ವಾಗತಾರ್ಹವಾಗಿದೆ‘ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.