
ಪ್ರಜಾವಾಣಿ ವಾರ್ತೆ
ಕವಿತಾಳ: ಸಮೀಪದ ಪಾಮನಕಲ್ಲೂರು ಮತ್ತು ಸುತ್ತಮತ್ತಲಿನ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಸೇರಿದಂತೆ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಬಜೆಟ್‌ನಲ್ಲಿ ₹ 990 ಕೋಟಿ ಹಣ ನೀಡುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಅಮೀನಗಡ ಗ್ರಾಮದಲ್ಲಿ ಮುಖಂಡರು ಶುಕ್ರವಾರ ಸಂಭ್ರಮಾಚರಣೆ ಮಾಡಿದರು.
ಪರಸ್ಪರ ಸಿಹಿ ವಿತರಣೆ ಮಾಡಿದ ಮುಖಂಡರು ರಾಜ್ಯ ಸರ್ಕಾರದ ಪರ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಮರೇಗೌಡ, ಮುದುಕಪ್ಪ ಸಜ್ಜನ, ಹುಚ್ಚಪ್ಪ ನಂದ್ಯಾಳ, ಬುಡ್ಡುಸಾಬ ಬಂಕದ, ಮಂಜೂರು ಪಾಶಾ, ಮಾಳಿಂಗರಾಯ, ಹುಚ್ಚರಡ್ಡಿ, ದಾವೂದ ಅಲೀ, ಮಲ್ಲೇಶಪ್ಪ, ಲಕ್ಷ್ಮಿಪತಿ, ಗಂಗಪ್ಪ ಮೇಟಿ, ಇಮ್ಮಣ್ಣ ಗುರಗುಂಟಿ ಮತ್ತು ರಾಜಾಸಾಬ ನೆಲಕೊಳ, ಶ್ರೀನಿವಾಸ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.