
ಲಿಂಗಸುಗೂರು: ‘ನಾಟಕ ರಂಗಭೂಮಿಯಲ್ಲಿ ಜೀವಂತ ಕಲೆ ಅಡಗಿದ್ದು, ಅದನ್ನು ಉಳಿಸಿ–ಬೆಳೆಸುವ ಕೆಲಸ ಎಲ್ಲೆಡೆ ನಡೆಯಬೇಕಿದೆ’ ಎಂದು ಪತ್ರಕರ್ತ ಶಿವರಾಜ ಕೆಂಭಾವಿ ಹೇಳಿದರು.
ತಾಲ್ಲೂಕಿನ ಆನಾಹೊಸೂರು ಗ್ರಾಮದಲ್ಲಿ ಅಶೋಕಗೌಡ, ಸುರೇಂದ್ರಗೌಡ ಗೆಳೆಯರ ಬಳಗ ಮುದಗಲ್, ಜಾನಪದ ಪರಿಷತ್ ತಾಲ್ಲೂಕು ಘಟಕ ಸೇರಿ ಇತರ ಸಂಘಟನೆಗಳ ಸಹಯೋಗದಲ್ಲಿ ನಡೆದ ನಾಟಕೋತ್ಸವ ಸಮಾರಂಭದ ಸಮಾರೋಪ ಸಮಾರಂಭ ಬುಧವಾರ ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಿ.ಜಿ. ಗುರಿಕಾರ, ತಾಲ್ಲೂಕು ಜಾನಪದ ಪರಿಷತ್ ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮಿದೇವಿ ನಡುವಿನಮನಿ, ಉಪಾಧ್ಯಕ್ಷೆ ಶಶಿಕಲಾ ಭೋವಿ, ಗ್ರಾಮ ಪಂಚಾಯಿತಿ ಸದಸ್ಯರಾದ ಯಲ್ಲಮ್ಮ ಚಂದ್ರಪ್ಪ, ಉಮಾಶ್ರೀ ಅರುಣಕುಮಾರ ವಾಲ್ಮೀಕಿ, ಶಹಜಾನ್ ರಾಜಮೋದಿನಸಾಬ್, ಮಹಿಬೂಬುಬೀ ಖಾಸಿಂಸಾಬ್, ಶಿವಪ್ಪ ಗದ್ದೆಪ್ಪ, ಮಾನಮ್ಮ ಗುಂಡಪ್ಪ,ಅಮರೇಶ ಉಳ್ಳಾಗಡ್ಡಿ, ಸಂಗಪ್ಪ ಅಂಗಡಿ, ದಯಾನಂದ ಸೂಗೂರು, ಸಂಗಪ್ಪ ಭಾವಿಮನಿ, ಹಾಗೂ ಇನ್ನಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.