ADVERTISEMENT

ರಾಯಚೂರು: ಸರ್ದಾರ್ ಪಟೇಲ್ ಜನ್ಮದಿನಾಚರಣೆ; ಜಿಲ್ಲಾಮಟ್ಟದ ಏಕತಾ ಕಾಲ್ನಡಿಗೆ ಯಾತ್ರೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:39 IST
Last Updated 21 ನವೆಂಬರ್ 2025, 6:39 IST
ರಾಯಚೂರು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಏಕತಾ ಕಾಲ್ನಡಿಗೆ ಯಾತ್ರೆಯ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಮತ್ತಿತರರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು
ರಾಯಚೂರು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಏಕತಾ ಕಾಲ್ನಡಿಗೆ ಯಾತ್ರೆಯ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಮತ್ತಿತರರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು   

ರಾಯಚೂರು: ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಮೇರಾ ಯುವ ಭಾರತ, ರಾಷ್ಟ್ರೀಯ ಸೇವಾ ಯೋಜನೆ, ರೋಟರಿ ಕ್ಲಬ್ ಕೃಷ್ಣ ತುಂಗೆ, ಎನ್‌ಸಿಸಿ ಮತ್ತು ಭಾರತ ಸೇವಾ ದಳದ ಆಶ್ರಯದಲ್ಲಿ ಗುರುವಾರ ರಾಯಚೂರು ನಗರದಲ್ಲಿ ಜಿಲ್ಲಾಮಟ್ಟದ ಏಕತಾ ಯಾತ್ರೆ ಶಿಸ್ತುಬದ್ಧವಾಗಿ ನಡೆಯಿತು.

ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ನಿಮಿತ್ತ ನಡೆದ ಜಿಲ್ಲಾಮಟ್ಟದ ಏಕತಾ ಕಾಲ್ನಡಿಗೆ ಯಾತ್ರೆಯು ಬೆಳಿಗ್ಗೆ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಿ, ಬಸವೇಶ್ವರ ವೃತ್ತ, ಗಾಂಧಿ ಚೌಕ್, ಚಂದ್ರಮೌಳೇಶ್ವರ ಸರ್ಕಲ್ ವೃತ್ತದ ಮೂಲಕ ಸಾಗಿ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತಕ್ಕೆ ಬಂದು ಮುಕ್ತಾಯವಾಯಿತು.

ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಮಾತನಾಡಿ, ‘ಭಾರತ ದೇಶದ ಏಕೀಕರಣದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ದೇಶಪ್ರೇಮ, ಸಂಘಟನಾತ್ಮಕ ಗುಣಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಮಹಾಗನಗರ ಪಾಲಿಕೆಯ ಉಪ ಆಯುಕ್ತೆ ಸಂತೋಷ ರಾಣಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ತಾಲ್ಲೂಕುಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಪವನ್ ಕಿಶೋರ್ ಪಾಟೀಲ, ಭಾರತ ಸೇವಾದಳದ ಅಧ್ಯಕ್ಷ ವಿರೂಪಾಕ್ಷಪ್ಪ ಕ್ಯಾದಿಗೇರಿ, ಮುಖಂಡರಾದ ವೀರನಗೌಡ ಪಾಟೀಲ, ಯು.ನರಸರೆಡ್ಡಿ, ಶಂಕರರೆಡ್ಡಿ, ಸಂತೋಷ ರಾಜಗುರು, ಗೌತಮ ರೆಡ್ಡಿ, ವಿಜಯಕುಮಾರ ಸಜ್ಜನ, ವಿದ್ಯಾಸಾಗರ ಚಿಮಣಗೇರಿ ಇದ್ದರು. ವಿವಿಧ ಸಂಘ– ಸಂಸ್ಥೆಗಳ ಪ್ರಮುಖರು ಮತ್ತು ಶಾಲಾ– ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.