ಚುನಾವಣೆ
(ಸಾಂದರ್ಭಿಕ ಚಿತ್ರ)
ಚನ್ನಪಟ್ಟಣ: ಇಲ್ಲಿನ ನಗರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ 9ನೇ ವಾರ್ಡ್ ಸದಸ್ಯ ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರಸಭೆಯ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಸ್ಥಾಯಿ ಸಮಿತಿ ನೂತನ ಅಧ್ಯಕ್ಷರನ್ನು ನಗರಸಭೆ ಅಧ್ಯಕ್ಷ ವಾಸಿಲ್ ಆಲಿಖಾನ್, ಉಪಾಧ್ಯಕ್ಷ ಶ್ರೀನಿವಾಸ್ ಮೂರ್ತಿ, ಪೌರಾಯುಕ್ತ ಮಹೇಂದ್ರ, ತೌಸಿಫ್ ಅಹಮ್ಮದ್, ಲಿಯಾಕತ್ ಆಲಿಖಾನ್, ಉಮಾ, ಲಕ್ಷ್ಮಮ್ಮ, ವಿ.ಸತೀಶ್ ಬಾಬು, ಎಂ.ವಿ. ನಾರಾಯಣ, ಜಯಮಾಲ, ಸೈಯದ್ ರಫೀಕ್ ಅಹಮ್ಮದ್, ಬಿ.ಎಂ.ನಾಗೇಶ್, ಮತೀನ್ ಖಾನ್, ಸೈಯದ್ ರಫೀಕ್ ಅಹಮದ್, ಬಾವಸಾ, ಕೋಟೆ ಸ್ವಾಮಿ, ಗಿರೀಶ್, ಪ್ರಶಾಂತ್, ಇತರರು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.