ಮಾವು
ಚನ್ನಪಟ್ಟಣ: ಬ್ರಹ್ಮಣೀಪುರ –ವಿಠಲೇನಹಳ್ಳಿ ರಸ್ತೆಯಲ್ಲಿ ಗುರುವಾರ ರಾತ್ರಿ ಟ್ರಾಕ್ಟರ್ ಪಲ್ಟಿಯಾಗಿ ದೊಡ್ಡನಹಳ್ಳಿ ಗ್ರಾಮದ ಶರತ್ (28) ಎಂಬ ರೈತ ಮೃತಪಟ್ಟಿದ್ದಾರೆ. ಮಾವು ಬೆಳೆಗಾರರಾದ ಶರತ್ ಅವರು, ತಮ್ಮ ತೋಟದ ಮಾವುಗಳನ್ನು ಟ್ರಾಕ್ಟರ್‌ನಲ್ಲಿ ಸಂಜೆ ತುಂಬಿಸಿಕೊಂಡು ಚನ್ನಪಟ್ಟಣದಲ್ಲಿ ಮಾರಾಟ ಮಾಡಲು ಹೋಗಿದ್ದರು.
ಪಟ್ಟಣದ ಎಪಿಎಂಪಿಯಲ್ಲಿ ಮಾವು ಮಾರಾಟ ಮಾಡಿ ರಾತ್ರಿ ಗ್ರಾಮಕ್ಕೆ ಹಿಂದಿರುಗುವಾಗ ಬ್ರಹ್ಮಣೀಪುರ –ವಿಠಲೇನಹಳ್ಳಿ ರಸ್ತೆಯಲ್ಲಿ, ಚಾಲಕನ ನಿಯಂತ್ರಣ ಕಳೆದುಕೊಂಡ ಟ್ರಾಕ್ಟರ್ ರಸ್ತೆಯಲ್ಲಿ ಪಲ್ಟಿಯಾಗಿದೆ. ಅಡಿಯಲ್ಲಿ ಸಿಲುಕಿದ ಶರತ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಕುರಿತು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.