ADVERTISEMENT

ಕಾಡಾನೆ ದಾಳಿ: ಕಲ್ಲನಕುಪ್ಪೆ ಗ್ರಾಮದಲ್ಲಿ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 4:58 IST
Last Updated 5 ನವೆಂಬರ್ 2025, 4:58 IST
ಹಾರೋಹಳ್ಳಿ ತಾಲ್ಲೂಕಿನ ಕಲ್ಲನಕುಪ್ಪೆ ಗ್ರಾಮದಲ್ಲಿ ಕಾಡನೆಗಳು ದಾಳಿ ನಡೆಸಿ ತೆಂಗಿನ ಸಸಿ ನಾಶ ಪಡಿಸಿರುವುದು
ಹಾರೋಹಳ್ಳಿ ತಾಲ್ಲೂಕಿನ ಕಲ್ಲನಕುಪ್ಪೆ ಗ್ರಾಮದಲ್ಲಿ ಕಾಡನೆಗಳು ದಾಳಿ ನಡೆಸಿ ತೆಂಗಿನ ಸಸಿ ನಾಶ ಪಡಿಸಿರುವುದು   

ಹಾರೋಹಳ್ಳಿ: ತಾಲ್ಲೂಕಿನ ಕಲ್ಲನಕುಪ್ಪೆ ಗ್ರಾಮದಲ್ಲಿ ಕಾಡಾನೆಗಳು ರಾಗಿ, ತೆಂಗು ಬೆಳೆ ತುಳಿದು ಹಾನಿಪಡಿಸಿವೆ.

ಕಲ್ಲನಕುಪ್ಪೆ ಗ್ರಾಮದ ಶಿವರಾಜು ಅವರ ತೋಟಕ್ಕೆ ನುಗ್ಗಿದ ಕಾಡನೆಗಳು ತೋಟದಲ್ಲಿ 6ಕ್ಕೂ ಹೆಚ್ಚು ತೆಂಗಿನ ಗಿಡ, ರಾಗಿ ಬೆಳೆ, ರೇಷ್ಮೆ ಸಸಿಗಳ ನಾಶಪಡಿಸಿವೆ.

ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ರಾತ್ರಿ ವೇಳೆ ಹೊರ ಬಂದು ರೈತರ ಜಮೀನುಗಳ ಮೇಲೆ ದಾಳಿ ನಡೆಸುತ್ತಿವೆ. ಅಪಾರ ಪ್ರಮಾಣದ ಬೆಳೆ ನಾಶವಾಗಿ ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿದೆ. ಆನೆಗಳ ಕಾಟದಿಂದ ಬೇಸತ್ತು ಬೆಳೆ ಬೆಳೆಯುವುದನ್ನು ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಗತಿಪರ ರೈತ ಎ.ಎಂ ಶಿವರಾಜು ನೋವು ತೋಡಿಕೊಂಡರು.

ADVERTISEMENT

ಮರಳವಾಡಿ ಹೋಬಳಿ ಹಲವು ಗ್ರಾಮಗಳಲ್ಲಿ ಪ್ರತಿನಿತ್ಯ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದರೂ ರಾತ್ರಿ ವೇಳೆ ಆನೆಗಳು ದಾಳಿ ನಡೆಸುವುದು ನಿಂತಿಲ್ಲ. ಆನೆಗಳ ಹಾವಳಿ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕು. ಬೆಳೆ ಹಾನಿ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.