ರಾಮನಗರ: ಮನರಂಜನೆ ತಾಣ ವಂಡರ್‌ಲಾದಲ್ಲಿ ಜನ್ಮದಿನಕ್ಕೆ ಒಂದು ದಿನದ ಮಟ್ಟಿಗೆ ಉಚಿತ ಪಾಸ್ ಸಿಗಲಿದೆ. ಈ ಕೊಡುಗೆ ಪಡೆಯಲು ಜನ್ಮದಿನಕ್ಕೆ ಐದು ದಿನ ಮುನ್ನ ಅಥವಾ ನಂತರ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಈ ಕೊಡುಗೆ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳುವವರಿಗೆ ಮಾತ್ರ ಅನ್ವಯವಾಗಲಿದೆ.
ಗ್ರಾಹಕರು ತಮ್ಮ ಜನ್ಮದಿನ ಸೂಚಿಸುವ ಐಡಿ ಕಾರ್ಡ್‌ನೊಂದಿಗೆ ಬುಕ್ಕಿಂಗ್ ಮಾಡಿಕೊಳ್ಳಬೇಕು. ಜನ್ಮದಿನದಂದು ಕೇಕ್ ಮಾಡಲು ಅಥವಾ ವಿಶೇಷವಾಗಿ ಆಚರಿಸಿಕೊಳ್ಳಲು ಸ್ಥಳದ ವ್ಯವಸ್ಥೆ ಕೂಡ ಮಾಡಿ ಕೊಡಲಾಗುತ್ತದೆ. ಈ ಕೊಡುಗೆ ಬೆಂಗಳೂರು, ಹೈದರಾಬಾದ್ ಮತ್ತು ಕೊಚ್ಚಿಯಲ್ಲಿರುವ ವಂಡರ್‌ಲಾ ಪಾರ್ಕ್‌ಗಳಲ್ಲೂ ಲಭ್ಯವಿದೆ. ಮುಂಚಿತವಾಗಿ ಟಿಕೆಟ್ ಅನ್ನು https://www.wonderla.com/offers/birthdays-at-wonderla.html ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಡಬಹುದು.
ಪಾರ್ಕ್‌ನಲ್ಲಿ ಮಾನ್ಸೂನ್ ಅಂಗವಾಗಿ ಹೊಸ ಗೇಮ್‌ಗಳನ್ನು ಪರಿಚಯಿಸಲಾಗಿದೆ. ಬೆಂಗಳೂರು ಮತ್ತು ಹೈದರಾಬಾದ್ ಪಾರ್ಕ್‌ಗಳಲ್ಲಿ ಬಿಸಿನೀರಿನ ಗೇಮ್‌ಗಳು ಲಭ್ಯ ಇವೆ. ವಾರಾಂತ್ಯದಲ್ಲಿ ತೆರೆದ ಸ್ಥಳದಲ್ಲಿ ಡಿ.ಜೆ ಮನರಂಜನೆ ಇರಲಿದ್ದು, ಗ್ರಾಹಕರು ಸಂಗೀತಕ್ಕೆ ಹೆಜ್ಜೆ ಹಾಕಬಹುದು. ಆಹಾರ ಮೇಳ ಕೂಡ ನಡೆಯಲಿದೆ.
ಬುಧವಾರದಂದು ಆನ್‌ಲೈನ್ ಟಿಕೆಟ್ ಖರೀದಿಗೆ ಪ್ರತ್ಯೇಕವಾಗಿ ಶೇ 25 ರಿಯಾಯಿತಿ ಸಿಗಲಿದೆ. ಈ ಕೊಡುಗೆ ಆ.23ರವರೆಗೆ ಲಭ್ಯವಿದೆ. ಬುಧವಾರದ ಕೊಡುಗೆ ಲಾಭ ಪಡೆಯಲು https://www.wonderla.com/offers/save-25-on-wednesdays-at-wonderla-parks.html ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ ಮಾಡಬೇಕು ಎಂದು ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಅರುಣ್ ಚಿಟ್ಟಿಲಪಿಲ್ಲಿ ತಿಳಿಸಿದ್ದಾರೆ. ಮಾಹಿತಿಗೆ ಸಂಪರ್ಕ ಸಂಖ್ಯೆ: +91 80372 30333, +91 80350 73966.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.