
ಸಾಂದರ್ಭಿಕ ಚಿತ್ರ
ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಚಾಮುಂಡಿಪುರದಲ್ಲಿ ಜಮೀನಿಗೆ ಬೆಂಕಿ ತಗುಲಿ ಮರಗಿಡಗಳು ಸುಟ್ಟು ನಾಶವಾಗಿವೆ. ಹಳೆ ದ್ವೇಷದ ಹಿನ್ನಲೆಯಲ್ಲಿ ಬೆಂಕಿ ಹಚ್ಚಿದ್ದಾರೆ ಎಂದು ದೂರಿ ಜಮೀನಿನ ಮಾಲೀಕ ನಾಗರಾಜು ಪೊಲೀಸರಿಗೆ ದೂರು ನೀಡಿದ್ದಾರೆ.
ನಾಗರಾಜು ಅವರು ಶನಿವಾರ ನಗರದ ನ್ಯಾಯಾಲಯಕ್ಕೆ ಹೋಗಿ ಸಂಜೆ ವಾಪಸ್ ಬರುವಾಗ ಜಮೀನಿಗೆ ಬೆಂಕಿ ಬಿದ್ದು ಮರಗಿಡ, ತೋಟದ ಮನೆ ಬೆಂಕಿಗೆ ಆಹುತಿಯಾಗಿದೆ. ಜಮೀನಿನಲ್ಲಿ ಕಟ್ಟಿದ್ದ ಜೋಡಿ ಹಸುಗಳಲ್ಲಿ ಒಂದು ಹಸು ಕಾಣೆಯಾಗಿದ್ದು, ಮತ್ತೊಂದು ಹಸುವಿಗೆ ಸುಟ್ಟು ಗಾಯಗಳಾಗಿವೆ.
‘ಹಲವು ವರ್ಷಗಳಿಂದ ಚಂದ್ರನಾಯ್ಕ, ಕಮಾರನಾಯ್ಕ, ಪಾಪಣ್ಣಿನಾಯ್ಕ ನಡುವೆ ಜಮೀನು ವಿವಾದ ನಡೆಯುತ್ತಿತ್ತು, ಶನಿವಾರ ವಿಚಾರಣೆ ಇದ್ದುದರಿಂದ ಕೋರ್ಟ್‌ಗೆ ಹೋಗಿದ್ದೆವು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಿದ್ದಾರೆ’ ಎಂದು ನಾಗರಾಜು ಕೋಡಿಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.