ADVERTISEMENT

ಬಿಗ್‌ ಬಾಸ್‌ ಷೋನಲ್ಲಿ 'ರಣಹದ್ದು ಸ್ವಭಾವ' ಎಂದ ನಟ ಕಿಚ್ಚ ಸುದೀಪ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 17:53 IST
Last Updated 12 ಜನವರಿ 2026, 17:53 IST
<div class="paragraphs"><p>ಕಿಚ್ಚ ಸುದೀಪ</p></div>

ಕಿಚ್ಚ ಸುದೀಪ

   

ಚಿತ್ರ: ಇನ್‌ಸ್ಟಾಗ್ರಾಮ್

ರಾಮನಗರ: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಗ್‌ ಬಾಸ್‌’ ಕನ್ನಡ ರಿಯಾಲಿಟಿ ಷೋದ 12ನೇ ಆವೃತ್ತಿಯಲ್ಲಿ ಅಳಿವಿನಂಚಿನಲ್ಲಿರುವ ರಣಹದ್ದುಗಳ ಬಗ್ಗೆ ನಿರೂಪಕ ಕಿಚ್ಚ ಸುದೀಪ ತಪ್ಪಾದ ಮಾಹಿತಿ ನೀಡಿದ್ದಾರೆ ಎಂದು ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್‌ ಆಕ್ಷೇಪ ಎತ್ತಿದೆ.

ADVERTISEMENT

‘ವಾರದಕಥೆ ಕಿಚ್ಚನ ಜೊತೆ’ ಸಂಚಿಕೆಯ ಟಾಸ್ಕ್‌ನಲ್ಲಿ ‘ಹೊಂಚು ಹಾಕಿ ಸಂಚು ಮಾಡಿ ಸರಿಯಾದ ಸಮಯಕ್ಕೆ ಲಬಕ್ಕನೆ ಹಿಡಿಯುವುದು’ ಎಂದು ನಿರೂಪಕ ಕಿಚ್ಚ ಸುದೀಪ ಹೇಳಿರುವು ತಪ್ಪು ಮಾಹಿತಿ. ರಣಹದ್ದುಗಳು ಸತ್ತ ಜೀವಿಗಳ ಶವ ತಿಂದು ಪರಿಸರ ಸ್ವಚ್ಛಗೊಳಿಸಿ, ಸಾಂಕ್ರಾಮಿಕ ರೋಗ ಹರಡದಂತೆ ಪ್ರಮುಖ ಪಾತ್ರ ವಹಿಸುತ್ತವೆ. ತಪ್ಪು ಮಾಹಿತಿಯಿಂದ ರಣಹದ್ದುಗಳ ಸಂರಕ್ಷಣೆಗೆ ಹಿನ್ನಡೆಯಾಗಲಿದೆ. ಹಾಗಾಗಿ, ಸುದೀಪ್ ಈ ಬಗ್ಗೆ ಸ್ಪಷ್ಟೀಕರಣ ನೀಡಿ ಜನರಲ್ಲಿ ಉಂಟಾಗಿರುವ ತಪ್ಪಾದ ಗ್ರಹಿಕೆ ದೂರ ಮಾಡಬೇಕು ಎಂದು ಟ್ರಸ್ಟ್‌ ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.