
ರಾಮನಗರ: ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದಡಿ ಬೆಂಗಳೂರು ದಕ್ಷಿಣ ಜಿಲ್ಲೆಯಾದ್ಯಂತ ಡಿ. 21ರಿಂದ 24ರವರೆಗೆ ಐದು ವರ್ಷದೊಳಗಿನ ಮಕ್ಕಳಿಗೂ ಪೋಲಿಯೊ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಚನ್ನಪಟ್ಟಣ ತಾಲ್ಲೂಕಿನಲ್ಲಿ 19,007 ಮಕ್ಕಳಿದ್ದು, ಲಸಿಕೆ ಕಾರ್ಯಕ್ರಮಕ್ಕೆ 141 ಬೂತ್‌ಗಳು, 10 ಟ್ರಾನ್ಸಿಟ್ ತಂಡಗಳು, 1 ಮೊಬೈಲ್ ತಂಡ, 586 ಜನ ವ್ಯಾಕ್ಸಿನೇಟರ್, 29 ಮೇಲ್ವಿಚಾರಕರು ಹಾಗೂ 30 ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಹಾರೋಹಳ್ಳಿ ತಾಲ್ಲೂಕಿನಲ್ಲಿ 6,505 ಮಕ್ಕಳಿದ್ದು, ಕಾರ್ಯಕ್ರಮಕ್ಕೆ 46 ಬೂತ್‌ಗಳು, 1 ಟ್ರಾನ್ಸಿಟ್ ತಂಡ,4 ಮೊಬೈಲ್ ತಂಡ, 196 ಜನ ವ್ಯಾಕ್ಸಿನೇಟರ್‌ಗಳು, 9 ಮೇಲ್ವಿಚಾರಕರು ಹಾಗೂ 13 ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಕನಕಪುರ ತಾಲ್ಲೂಕಿನಲ್ಲಿ 15,237 ಮಕ್ಕಳಿದ್ದು, ಲಸಿಕಾ ಕಾರ್ಯಕ್ರಮಕ್ಕೆ 134 ಬೂತ್‌ಗಳು, 7 ಟ್ರಾನ್ಸಿಟ್ ತಂಡಗಳು, 6 ಮೊಬೈಲ್ ತಂಡ, 572 ಜನ ವ್ಯಾಕ್ಸಿನೇಟರ್‌ಗಳು, 26 ಮೇಲ್ವಿಚಾರಕರು ಹಾಗೂ 32 ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಮಾಗಡಿ ತಾಲ್ಲೂಕಿನಲ್ಲಿ 12,492 ಮಕ್ಕಳಿದ್ದು, ಲಸಿಕಾ ಕಾರ್ಯಕ್ರಮಕ್ಕೆ 91 ಬೂತ್‌ಗಳು, 4 ಟ್ರಾನ್ಸಿಟ್ ತಂಡಗಳು, 3 ಮೊಬೈಲ್ ತಂಡ, 378 ಜನ ವ್ಯಾಕ್ಸಿನೇಟರ್‌ಗಳು, 18 ಮೇಲ್ವಿಚಾರಕರು ಹಾಗೂ 21 ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ರಾಮನಗರ ತಾಲ್ಲೂಕಿನಲ್ಲಿ 22,251 ಮಕ್ಕಳಿದ್ದಾರೆ. ಲಸಿಕಾ ಕಾರ್ಯಕ್ರಮಕ್ಕೆ 135 ಬೂತ್‌ಗಳು, 12 ಟ್ರಾನ್ಸಿಟ್ ತಂಡಗಳು, 3 ಮೊಬೈಲ್ ತಂಡ, 570 ಜನ ವ್ಯಾಕ್ಸಿನೇಟರ್‌ಗಳು, 28 ಮೇಲ್ವಿಚಾರಕರು ಹಾಗೂ 31 ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಒಟ್ಟಾರೆ ಬೆಂಗಳೂರು ದಕ್ಷಿಣ ಜಿಲ್ಲೆಯಾದ್ಯಂತ 75,492 ಮಕ್ಕಳಿದ್ದಾರೆ. ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ 547 ಬೂತ್‌ಗಳು, 34 ಟ್ರಾನ್ಸಿಟ್ ತಂಡಗಳು, 17 ಮೊಬೈಲ್ ತಂಡ, 2302 ಜನ ವ್ಯಾಕ್ಸಿನೇಟರ್‌ಗಳು, 110 ಮೇಲ್ವಿಚಾರಕರು ಹಾಗೂ 127 ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಪೋಲಿಯೊ ಕಾರ್ಯಕ್ರಮ ಡಿ. 21ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೂತ್‌ಗಳ ಮುಖಾಂತರ ಪೋಲಿಯೊ ಲಸಿಕೆನು ಹಾಕಲಾಗುವುದು. ನಂತರ ಡಿ. 22ರಿಂದ 24ರವರೆಗೆ ಮನೆ ಮನೆ ಭೇಟಿ ನೀಡಿ ಲಸಿಕೆ ನೀಡಲಾಗುವುದು. ನಗರ ಪ್ರದೇಶಗಳಲ್ಲಿ 3 ದಿನ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 2 ದಿನ ಮನೆ ಮನೆ ಭೇಟಿ ನೀಡಿ ಲಸಿಕೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.