ADVERTISEMENT

ವಿಜ್ಞಾನದ ವಿದ್ಯಾರ್ಥಿಗೆ ಕನ್ನಡದಲ್ಲಿ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 16:17 IST
Last Updated 5 ಫೆಬ್ರುವರಿ 2021, 16:17 IST
ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಸೌಂದರ್ಯ ಜೊತೆಗೆ ಕಾಲೇಜಿನ ಪ್ರಾಚಾರ್ಯ ಕಿಶೋರ್ ಹಾಗೂ ಪ್ರಾಧ್ಯಾಪಕರು ಜೊತೆಗಿದ್ದಾರೆ
ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಸೌಂದರ್ಯ ಜೊತೆಗೆ ಕಾಲೇಜಿನ ಪ್ರಾಚಾರ್ಯ ಕಿಶೋರ್ ಹಾಗೂ ಪ್ರಾಧ್ಯಾಪಕರು ಜೊತೆಗಿದ್ದಾರೆ   

ರಾಮನಗರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ವಿಭಾಗ ವಿದ್ಯಾರ್ಥಿನಿ ಸೌಂದರ್ಯ ಕನ್ನಡ ಭಾಷೆಯಲ್ಲಿ ಬೆಂಗಳೂರು ವಿ.ವಿ.ಯಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಸದ್ಯ ಪದವಿ ಮುಗಿಸಿ, ಬಿ.ಇಡಿ ಓದುತ್ತಿರುವ ಸೌಂದರ್ಯ ಮೂಲ ವಿಜ್ಞಾನ ವಿದ್ಯಾರ್ಥಿನಿ. ಅವರು ಕನ್ನಡದಲ್ಲಿ ನಾಲ್ಕು ಸೆಮಿಸ್ಟರ್‌ಗಳಲ್ಲಿ 400 ಅಂಕಗಳಿಗೆ 380 ಅಂಕ ಪಡೆಯುವ ಮೂಲಕ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ರಾಮನಗರ ತಾಲ್ಲೂಕಿನ ಅಮ್ಮನಪುರ ಗ್ರಾಮದವರಾಗಿರುವ ಸೌಂದರ್ಯ ಬಿ.ಇಡಿ ಮುಗಿಸಿ, ಅರ್ಗೇನಿಕ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಬಯಕೆ ಹೊಂದಿದ್ದು, ಸಂಶೋಧನಾ ವಿಭಾಗದಲ್ಲಿ ಮುಂದುವರೆಯಬೇಕೆಂಬ ಆಶಯ ಅವರದ್ದು.

ADVERTISEMENT

ಈಕೆಗೆ ಸಾಧನೆ ಬಗ್ಗೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ರಾಜಶೇಖರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮೂಲ ವಿಜ್ಞಾನದ ವಿದ್ಯಾರ್ಥಿ ಕನ್ನಡ ಭಾಷೆಯಲ್ಲಿ ಚಿನ್ನದ ಪದಕ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಈಕೆ ಇತರರಿಗೆ ಮಾದರಿ ಎಂದರು. ಕಾಲೇಜಿನ ಪ್ರಾಚಾರ್ಯ ಕಿಶೋರ್ ಹಾಗು ಉಪನ್ಯಾಸಕರು ಆಕೆಯನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.