ADVERTISEMENT

ತೀರ್ಥಹಳ್ಳಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಮಲತಂದೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 6:03 IST
Last Updated 8 ಸೆಪ್ಟೆಂಬರ್ 2021, 6:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಮಲತಂದೆ ಹಾಗೂ ನೆರೆ ಮನೆಯ ಪುರುಷ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮೊದಲ ಪತ್ನಿ ತ್ಯಜಿಸಿದ್ದ 36 ವರ್ಷದ ಆರೋಪಿ ಬಯಲು ಸೀಮೆಗೆ ಕೂಲಿ ಕೆಲಸಕ್ಕೆ ಹೋದಾಗ ವಿಧವೆಯೊಬ್ಬರ ಪರಿಚಯವಾಗಿದೆ. ಒಬ್ಬ ಮಗಳ ತಾಯಿಯಾಗಿದ್ದ ಅವರನ್ನು ಮದುವೆಯಾಗಿ ಸ್ವಗ್ರಾಮದಲ್ಲೇ ನೆಲೆಸಿದ್ದ. ಪತ್ನಿ ಕೆಲಸಕ್ಕೆ ಹೋದಾಗ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇಬ್ಬರೂ ಕೆಲಸಕ್ಕೆ ಹೋದಾಗ ನೆರೆ ಮನೆಯ ವ್ಯಕ್ತಿ (43) ಅತ್ಯಾಚಾರ ಮಾಡಿದ್ದಾನೆ.

ಶಾಲೆ ಆರಂಭದ ನಂತರ ಮಂಕಾಗಿದ್ದ ಬಾಲಕಿಯನ್ನು ಶಿಕ್ಷಕರು ಪ್ರಶ್ನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಾಳೂರು ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.