ಶಿವಮೊಗ್ಗ: ಬಾಲಕಿ ಮೇಲೆ ಅತ್ಯಾಚಾರಎಸಗಿದ್ದ ಆರೋಪಿಗೆ ಪೋಕ್ಸೊವಿಶೇಷ ನ್ಯಾಯಾಲಯ 10 ವರ್ಷ ಕಠಿಣಶಿಕ್ಷೆ, ₹30ಸಾವಿರ ದಂಡ ವಿಧಿಸಿದೆ.
ತೀರ್ಥಹಳ್ಳಿ ತಾಲ್ಲೂಕಿನ ತೂದೂರು ಹೊಸಕೆರೆಯ ಭಾಸ್ಕರ (32) ಶಿಕ್ಷಗೆ ಒಳಗಾದ ಆರೋಪಿ.
ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಎರಡು ವರ್ಷಗಳ ಹಿಂದೆ ಮಾಳೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಧೀಶ ಕೆ.ಬಿ. ಶಿವಪ್ರಸಾದ್ ಆದೇಶ ನೀಡಿದ್ದಾರೆ.ಜಿಲ್ಲಾ ಕಾನೂನು ನೆರವು ಸಮಿತಿಯ ಶಿಫಾರಸ್ಸು ಮೇರೆಗೆ ಸರ್ಕಾರ ಸಂತ್ರಸ್ತೆಗೆ ₨3 ಲಕ್ಷ ಪರಿಹಾರ ನೀಡಿದೆ.ಸರ್ಕಾರದ ಪರವಾಗಿ ವಿಶೇಷಅಭಿಯೋಜಕ ಎಸ್.ಕೆ.ಮೂರ್ತಿರಾವ್ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.