
ಭದ್ರಾವತಿ (ಶಿವಮೊಗ್ಗ): ದಿವಂಗತ ಡಾ.ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ಸಂಘದಿಂದ ನಗರದ ರೈಲ್ವೆ ನಿಲ್ದಾಣದ ಎದುರು ಪುನೀತ್ ಹಾಗೂ ರಾಜಕುಮಾರ್ ಅವರಿಗಾಗಿ ದೇಗುಲ ನಿರ್ಮಿಸಲಾಗಿದ್ದು, ಅದರಲ್ಲಿ ಇಬ್ಬರೂ ನಟರ 3 ಅಡಿ ಎತ್ತರದ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ.
ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ದೇಗುಲ ಲೋಕಾರ್ಪಣೆ ಮಾಡಿದರು.
‘ಪ್ರತಿಮೆಗಳಿಗೆ ತಲಾ ₹ 5 ಲಕ್ಷ ಹಾಗೂ ದೇಗುಲ ನಿರ್ಮಾಣಕ್ಕೆ ₹ 25 ಲಕ್ಷ ವೆಚ್ಚವಾಗಿದೆ. ಪುನೀತ್ ಮತ್ತು ರಾಜಕುಮಾರ್ ಅಭಿಮಾನಿಗಳ ದೇಣಿಗೆಯಿಂದ ದೇಗುಲ ನಿರ್ಮಿಸಲಾಗಿದೆ. ಇಲ್ಲಿ ಪ್ರತಿನಿತ್ಯ ಪೂಜೆ ನಡೆಸಲಾಗುತ್ತದೆ’ ಎಂದು ಅಭಿಮಾನಿ ಸಂಘದವರು ತಿಳಿಸಿದ್ದಾರೆ.
ಇದೇ ವೇಳೆ ನಗರದಲ್ಲಿರುವ ತಾಲ್ಲೂಕು ಕಚೇರಿ ರಸ್ತೆಗೆ ‘ಡಾ.ಪುನೀತ್ ರಾಜಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲಾಯಿತು. ಇದರ ನಾಮಫಲಕ ಹಾಗೂ ಕನಕ ಆಟೊ ಚಾಲಕರ ಸಂಘದಿಂದ ಪ್ರತ್ಯೇಕವಾಗಿ ಪ್ರತಿಷ್ಠಾಪಿಸಲಾದ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನೂ ಅಶ್ವಿನಿ ಅನಾವರಣಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.