ADVERTISEMENT

ಈದ್ ಮಿಲಾದ್: ಸರಳ ಆಚರಣೆ- ರೋಗಿಗಳಿಗೆ ಹಣ್ಣು ಹಂಪಲು, ಬ್ರೆಡ್ ವಿತರಣೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 4:25 IST
Last Updated 20 ಅಕ್ಟೋಬರ್ 2021, 4:25 IST
ಶಿವಮೊಗ್ಗದ ಸುನ್ನಿ ಜಮಾಯತ್ ಉಲ್ಲಾ ಕಮಿಟಿಯಿಂದ ಗಾಂಧಿ ಬಜಾರ್‌ನಲ್ಲಿರುವ ಜಾಮೀಯಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಶಿವಮೊಗ್ಗದ ಸುನ್ನಿ ಜಮಾಯತ್ ಉಲ್ಲಾ ಕಮಿಟಿಯಿಂದ ಗಾಂಧಿ ಬಜಾರ್‌ನಲ್ಲಿರುವ ಜಾಮೀಯಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.   

ಶಿವಮೊಗ್ಗ: ಪ್ರವಾದಿ ಮುಹಮ್ಮದ್‌ ಪೈಗಂಬರ್‌ ಅವರ ಜನ್ಮದಿನದ ಪ್ರಯುಕ್ತ ಮಂಗಳವಾರ ಜಿಲ್ಲೆಯಾದ್ಯಂತ ‘ಈದ್‌ ಮಿಲಾದ್‌’ ಹಬ್ಬವನ್ನು ಮುಸ್ಲಿಮರು ಸರಳವಾಗಿ ಆಚರಿಸಿದರು.

ನಗರ ಮುಸ್ಲಿಂ ಒಕ್ಕೂಟದಿಂದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ರೋಗಿಗಳಿಗೆ ಬ್ರೆಡ್ ಹಾಗೂ
ಹಣ್ಣು ವಿತರಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಮೊಹಮ್ಮದ್ ನಿಹಾಲ್, ಅಖಿಲ್ ರಝಾ, ಮೊಹ್ಮದ್ ಆರಿಫ್ ವುಲ್ಲಾ, ಸಾಹುಲ್ ಹಮೀದ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಎನ್. ರಮೇಶ್, ಕಲೀಂ ಪಾಷ, ಇರ್ಫಾನ್ ಖಾನ್, ಪೂರ್ಣೇಶ್ ಕುಮಾರ್ ಅವರೂ ಇದ್ದರು.

ರೈಲ್ವೇ ನಿಲ್ದಾಣದ ಆಟೊ ಚಾಲಕರು ಮತ್ತು ಮಾಲೀಕರ ಸಂಘದಿಂದ ಸಾರ್ವಜನಿಕರಿಗೆ ರೈಲ್ವೇ ನಿಲ್ದಾಣ ಮುಂಭಾಗ ಹಣ್ಣು ವಿತರಿಸಲಾಯಿತು. ಸಂಘದ ಅಧ್ಯಕ್ಷ ಅಲ್ಲಾಬಕ್ಷ್, ಸ್ಥಳೀಯ ಕಾರ್ಪೊರೇಟರ್ ರಮೇಶ್ ಹೆಗ್ಡೆ, ಸಂತೋಷ್ ಬಳ್ಳೆಕೆರೆ, ಪ್ರಧಾನ ಕಾರ್ಯದರ್ಶಿ ನಾಸೀರ್, ಕಲೀಂ ಇದ್ದರು.

ADVERTISEMENT

ಸುನ್ನಿ ಜಮಾಯತ್ ಉಲ್ಲಾ ಕಮಿಟಿಯಿಂದ ಗಾಂಧಿ ಬಜಾರ್‌ನಲ್ಲಿರುವ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಹಬ್ಬದ ನಿಮಿತ್ತ ವಿಶೇಷ ಅಡುಗೆ ಮಾಡಿ ಸವಿದರು. ಅನೇಕರು ಬಡವರಿಗೆ ಹಬ್ಬದ ಊಟ ನೀಡಿದರು. ಈ ಹಿಂದೆ ಈದ್ ಮಿಲಾದ್ ಜಿಲ್ಲೆಯಲ್ಲಿ ಸಂಭ್ರಮದಿಂದ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.