ADVERTISEMENT

ಶಿವಮೊಗ್ಗ: ಆಗುಂಬೆ ಭಾಗದಲ್ಲಿ ಒಂಟಿ ಸಲಗದ ಹಾವಳಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 1:23 IST
Last Updated 5 ಸೆಪ್ಟೆಂಬರ್ 2019, 1:23 IST
   

ಶಿವಮೊಗ್ಗ: ಕೆಲದಿನಗಳ ಹಿಂದೆ ಬಿದರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನ ಹೊಸಂಗಡಿಯ ಕೃಷಿ ಕೂಲಿ ಕಾರ್ಮಿಕ ಕೃಷ್ಣಮೂರ್ತಿ ಅವರ ಮನೆಯ ಮೇಲೆ ಮಧ್ಯರಾತ್ರಿ ದಾಳಿ ಮಾಡಿದ್ದ ಆನೆ ಪುನಃ ಆತಂಕ ಸೃಷ್ಟಿಸುತ್ತಿದೆ.

ಆನೆ ಜನವಸತಿ ಪ್ರದೇಶದಲ್ಲಿಯೇ ಬೀಡು ಬಿಟ್ಟಿದ್ದು ಜನರಲ್ಲಿ ಗಾಬರಿ ಹುಟ್ಟಿಸಿದೆ. ಈ ಬಾರಿ ಅದೇ ಗ್ರಾಮದ ಹೊಸಂಗಡಿ ಜೇಡಿಕುಣಿ ಜಡ್ಡು ಎಂಬಲ್ಲಿ ಠಿಕಾಣಿ ಹೂಡಿರುವ ಸುಮಾರು 14 ಅಡಿಗೂ ಹೆಚ್ಚು ಎತ್ತರವಿರುವ ಬೃಹತ್ ಗಾತ್ರದ ಆನೆ ಆಗುಂಬೆ-ಬಿದರಗೋಡು ಮುಖ್ಯ ರಸ್ತೆಯು ಸೇರಿದಂತೆ ರೈತರ ಜಮೀನಿನಲ್ಲಿ ಹಗಲಿರುಳು ರಾಜಾರೋಷವಾಗಿ ಓಡಾಡುತ್ತಿದ್ದು,ಆತಂಕ ಸೃಷ್ಟಿಸಿದೆ.

ಗುರುವಾರ ಬೆಳಗ್ಗೆ ಮುಖ್ಯ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಸಲಗವನ್ನು ಕಂಡು ಸ್ಥಳೀಯರು ಹಾಗೂ ವಾಹನಸವಾರರು ದಿಗಿಲುಗೊಂಡಿದ್ದಾರೆ.

ADVERTISEMENT

ಹೊಸಂಗಡಿಯ ಒಂಟಿಮನೆಯಲ್ಲಿ ತಾಯಿಮಗ ಇಬ್ಬರೆ ವಾಸಿಸುತ್ತಿದ್ದ ಶಾಂತಮ್ಮ ಎಂಬುವರು ಆನೆಗೆ ಹೆದರಿ ಜೀವಭಯದಿಂದ ಮನೆಬಿಟ್ಟು ಮಗನೊಂದಿಗೆ ರಾತ್ರಿ ತಮ್ಮ ಬಂಧುಗಳ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.