ADVERTISEMENT

ಸೊರಬ | ಗಣೇಶ ಮೂರ್ತಿಗಳ ವಿಸರ್ಜನೆ: DJ ಸದ್ದಿಗೆ ಕುಸಿದು ಬಿದ್ದ ಪೊಲೀಸ್‌ ಅಧಿಕಾರಿ

ಹೆಚ್ಚಿದ ರಕ್ತದೊತ್ತಡ.. ಕಿವಿಗೆ ತೊಂದರೆ...

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 23:30 IST
Last Updated 5 ಸೆಪ್ಟೆಂಬರ್ 2025, 23:30 IST
<div class="paragraphs"><p>ಡಿ.ಜೆ ಸದ್ದಿಗೆ ಕುಣಿದು ಕುಪ್ಪಳಿಸಿದ ಜನ&nbsp;&nbsp;</p></div>

ಡಿ.ಜೆ ಸದ್ದಿಗೆ ಕುಣಿದು ಕುಪ್ಪಳಿಸಿದ ಜನ  

   

ಶಿವಮೊಗ್ಗ: ಜಿಲ್ಲೆಯ ಸೊರಬದ ಮುಖ್ಯರಸ್ತೆಯಲ್ಲಿ ಗುರುವಾರ ರಾತ್ರಿ ಓಂ ಗಣಪತಿ ಹಾಗೂ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯ ವೇಳೆ ಡಿ.ಜೆ. ಸದ್ದಿನ ಅಬ್ಬರಕ್ಕೆ ಬಂದೋಬಸ್ತ್‌ ಕರ್ತವ್ಯದಲ್ಲಿದ್ದ ಇನ್‌ಸ್ಪೆಕ್ಟರ್ ರಾಜಶೇಖರ್ ತಲೆ ತಿರುಗಿ ಅಸ್ವಸ್ಥಗೊಂಡು ಬಿದ್ದಿದ್ದಾರೆ.

ಧ್ವನಿವರ್ಧಕದ ಅಬ್ಬರದಿಂದಾಗಿ ರಾಜಶೇಖರ್ ಕುಸಿದು ಕೆಳಗೆ ಬೀಳುವುದು ಹಾಗೂ ಅವರನ್ನು ಅಲ್ಲಿದ್ದವರು ಉಪಚರಿಸಿ ಕರೆದೊಯ್ಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. 

‘ಮೆರವಣಿಗೆ ವೇಳೆ ಎರಡು ಧ್ವನಿವರ್ಧಕ, ಬೇಸ್‌ ಬಳಸಲಾಗಿದೆ. ರಾಜಶೇಖರ್ ಅವರಿಗೆ ರಕ್ತದೊತ್ತಡ ಹೆಚ್ಚಿ ಕಿವಿಗೆ ತೊಂದರೆಯಾಗಿದೆ. ಈಗ ಗುಣಮುಖರಾಗಿದ್ದಾರೆ’  ಎಂದು ಎಸ್‌ಪಿ ಜಿ.ಕೆ. ಮಿಥುನ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಯಮ ಉಲ್ಲಂಘನೆ ಬಗ್ಗೆ ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಡಿ.ಜೆ. ಉಪಕರಣಗಳ ಮುಟ್ಟುಗೋಲಿಗೆ ಸ್ಥಳೀಯ ಠಾಣೆಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.