ರಿಪ್ಪನ್‌ಪೇಟೆ: ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗ್ರಾಮಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳು ಪ್ರತಿಷ್ಠಾಪಿಸಿದ್ದ ವಿನಾಯಕ ಮೂರ್ತಿಗಳನ್ನು ಭಾನುವಾರ ವಿಸರ್ಜಿಸಲಾಯಿತು.
ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಹರತಾಳುಕೋರೆ, ಕೆರೆಹಳ್ಳಿ ಅರಸಾಳು, ತಮಡಿ ಕೊಪ್ಪ, ಬಸವಾಪುರ, ಕಡೆಗೆದ್ದೆ, ಗುಳುಗುಳಿ ಶಂಕರ, ಆಲುವಳ್ಳಿ, ಕೆಂಚನಾಲ, ಚಂದಳ್ಳಿ, ಕೋಟೆತಾರಿಗ, ಚಿಕ್ಕಜೇನಿ, ಕೋಡೂರು, ಕಾಗೆಮರಡು, ಹೊಂಬುಜ, ಬಿದರಹಳ್ಳಿ, ಕಮಚ್ಚಿ, ಹೆದ್ದಾರಿಪುರ, ಮುಗುಡ್ತಿ, ಬಿ.ಕೆ.ಬಿ. ಬನಶೆಟ್ಟಿ ಕೊಪ್ಪ ಹಾಗೂ ಆನೆಗದ್ದೆ ಸೇರಿದಂತೆ ವಿವಿಧೆಡೆ 21 ಗಣೇಶ ಮೂರ್ತಿಗಳನ್ನು ಭಕ್ತರು ವಿಸರ್ಜನೆ ಮಾಡಿದರು.
ಮೆರವಣಿಗೆಯಲ್ಲಿ ಕೋಲಾಟ, ಭಜನೆ, ಡೊಳ್ಳು ಕುಣಿತ, ಡ್ರಂ ಸೆಟ್, ಗೊಂಬೆ ಕುಣಿತ ಗಮನ ಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.