ಶಿವಮೊಗ್ಗ: ಕಾರ್ಗಲ್‌ನ ಲಿಂಗನಮಕ್ಕಿ ಜಲಾಶಯ ಭರ್ತಿಯ ಹಂತ ತಲುಪಿರುವುದರಿಂದ ಮಂಗಳವಾರ ಶರಾವತಿ ನದಿಗೆ 15 ಸಾವಿರ ಕ್ಯುಸೆಕ್ ನೀರು ಹರಿಸಲಾಯಿತು. ಇದಕ್ಕೂ ಮುನ್ನ ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಜಲಾಶಯಕ್ಕೆ ಬಾಗಿನ ಸಲ್ಲಿಸಿದರು.
ಜಲಾಶಯದಿಂದ ನದಿಗೆ ನೀರು ಹರಿಸಿರುವುದರಿಂದ ಸಂಜೆಯ ವೇಳೆಗೆ ಜೋಗ ಜಲಪಾತದ ದೃಶ್ಯ ವೈಭವ ಕಳೆಗಟ್ಟಲಿದೆ.
61 ವರ್ಷಗಳ ಜಲಾಶಯದ ಇತಿಹಾಸದಲ್ಲಿ ಇಲ್ಲಿಯವರೆಗೆ 23 ಬಾರಿ ಲಿಂಗನಮಕ್ಕಿ ಅಣೆಕಟ್ಟೆ ಭರ್ತಿಯಾಗಿದೆ. ಸತತ ಮೂರು ವರ್ಷ ಭರ್ತಿ ಆದ ದಾಖಲೆಯನ್ನು ಈ ಬಾರಿ ಬರೆದಿದೆ.1819 ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1816.20 ಅಡಿ ನೀರಿನ ಸಂಗ್ರಹ ಇದೆ.
ಸದ್ಯ ಜಲಾಶಯಕ್ಕೆ 48,398 ಕ್ಯುಸೆಕ್ ಒಳಹರಿವು ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.