ADVERTISEMENT

ಮನೆಗೆ ಮಂಜುನಾಥ ರಾವ್ ಪಾರ್ಥಿವ ಶರೀರ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 5:51 IST
Last Updated 24 ಏಪ್ರಿಲ್ 2025, 5:51 IST
<div class="paragraphs"><p>ಮಂಜುನಾಥ ರಾವ್ ಅವರ ಪಾರ್ಥಿವ ಶರೀರ (ಒಳಚಿತ್ರದಲ್ಲಿ&nbsp;ಮಂಜುನಾಥ ರಾವ್)</p></div>

ಮಂಜುನಾಥ ರಾವ್ ಅವರ ಪಾರ್ಥಿವ ಶರೀರ (ಒಳಚಿತ್ರದಲ್ಲಿ ಮಂಜುನಾಥ ರಾವ್)

   

ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮೃತರಾದ ಮಂಜುನಾಥ ರಾವ್ ಪಾರ್ಥಿವ ಶರೀರ ಶಿವಮೊಗ್ಗದ ವಿಜಯ ನಗರ ಬಡಾವಣೆಯ ಮನೆ ತುಲುಪುತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

ಪಾರ್ಥಿವ ಶರೀರ ಶಿವಮೊಗ್ಗದ ಎಂ.ಆರ್.ಎಸ್.ವೃತ್ತಕ್ಕೆ ಬರುತ್ತಿದ್ದಂತೆಯೇ ಹಿಂದೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಬೈಕ್ ರ್‍ಯಾಲಿ ಮೂಲಕ ಬರಮಾಡಿಕೊಂಡರು.

ADVERTISEMENT

'ಭಾರತ ಮಾತೆಗೆ ಹೂ ಹಾಕಿ, ಪಾಕಿಸ್ತಾನಕ್ಕೆ ಬಾಂಬ್ ಹಾಕಿ' ಎನ್ನುವ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜೆಸಿಬಿಯ ಮುಂಭಾಗ ಉಗ್ರರ ಪ್ರತಿಕೃತಿ ನೇತಾಕಿ ರ್‍ಯಾಲಿ ನಡೆಸಿ, ಪಾಕಿಸ್ತಾನ ವಿರುದ್ಧ ಘೋಷಣೆ ಕೂಗಿದರು.

ಬಿ.ಎಚ್.ರಸ್ತೆಯ ಮೂಲಕ ಸಾಗಿದ ಆಂಬುಲೆನ್ಸ್ ಮೂಲಕ ಸಾಗಿ ಬೆಕ್ಕಿನಕಲ್ಮಠ, ಮೀನಾಕ್ಷಿ ಭವನ, ಅಮಿರ್ ಅಹ್ಮದ್ ವೃತ್ತ ಮೂಲಕ ಮುಖ್ಯ ಬಸ್ ನಿಲ್ದಾಣದಿಂದ ಸಾಗರ ರಸ್ತೆಯ ಸರ್ಕಿಟ್ ಹೌಸ್, ಆಯನೂರು ಗೇಟ್ ಮೂಲಕ ವಿಜಯ ನಗರ ಬಡಾವಣೆಯ ನೇತಾಜಿ ವೃತ್ತ ಸಮೀಪದ ಮನೆಗೆ ಪಾರ್ಥಿವ ಶರೀರ ತಲುಪಿತು.

ದಾರಿ ಉದ್ದಕ್ಕೂ ಸಾವಿರಾರು ಜನರು ಸೇರಿದ್ದರು. ಮಂಜುನಾಥ ರಾವ್ ನಿಧನಕ್ಕೆ ಕಂಬನಿ ಮಿಡಿದರು.

ನಗರದಾದ್ಯಂತ ಅಂಗಡಿ–ಮುಗ್ಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲಾಗಿತ್ತು.

ಮೃತ ಮಂಜುನಾಥ ಮನೆಯ ಎದುರು ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.