ADVERTISEMENT

Pahalgam Terror Attack | ಶಿವಮೊಗ್ಗದ ನಿವಾಸಕ್ಕೆ ಮಂಜುನಾಥ ರಾವ್ ಪಾರ್ಥಿವ ಶರೀರ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 5:25 IST
Last Updated 24 ಏಪ್ರಿಲ್ 2025, 5:25 IST
   

ಶಿವಮೊಗ್ಗ: ಕಾಶ್ಮೀರದ ಶ್ರೀನಗರದಿಂದ ಶಿವಮೊಗ್ಗಕ್ಕೆ ತರಲಾದ ಮಂಜುನಾಥ ರಾವ್ ಅವರ ಪಾರ್ಥಿವ ಶರೀರವನ್ನು ಬುಧವಾರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದೆ.

ಮನೆಯ ಮುಂದೆ ಹಾಕಲಾದ ಬ್ಯಾರಿಕೇಡ್‌ನಲ್ಲಿ ಸಾಲಾಗಿ ಬರುತ್ತಿರುವ ಸಾರ್ವಜನಿಕರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್. ಎನ್.ಚನ್ನಬಸಪ್ಪ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡ ಎಸ್. ದತ್ತಾತ್ರಿ ಸ್ಥಳದಲ್ಲಿದ್ದು, ಅಂತಿಮ ದರ್ಶನಕ್ಕೆ ಅಗತ್ಯ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ADVERTISEMENT

ಅಂತಿಮ ದರ್ಶನದ ನಂತರ ಪಾರ್ಥಿವ ಶರೀರದ ಮೆರವಣಿಗೆ ಸಾಗರ ರಸ್ತೆಯ ಐಬಿ ಸರ್ಕಲ್, ಹಳೇ ಜೈಲು ಸರ್ಕಲ್, ಶಿವಮೂರ್ತಿ ವೃತ್ತ, ಮಹಾವೀರ ಸರ್ಕಲ್, ಡಿವಿಎಸ್ ಸರ್ಕಲ್, ಬಿ.ಎಚ್.ರಸ್ತೆ, ಹೊಳೆ ಬಸ್ ನಿಲ್ದಾಣ ಮುಂಭಾಗದ ಮೂಲಕ ರೋಟರಿ ಚಿತಾಗಾರ ತಲುಪಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.