
ಶಿಕಾರಿಪುರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ವಿಶ್ವ ಧ್ಯಾನದಿನ ಕಾರ್ಯಕ್ರಮವನ್ನು ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು
ಶಿಕಾರಿಪುರ: ಮನಸ್ಸಿನ ಕಲ್ಮಶ ಹೋಗಲಾಡಿಸಿ ಶಾಂತತೆ ಮೂಡಿಸುವ ಧ್ಯಾನ ಜೀವನದ ಯಶಸ್ಸಿಗೂ ಕಾರಣವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ವಿಶ್ವ ಧ್ಯಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಕಾಲಘಟ್ಟದಲ್ಲಿ ಎಲ್ಲರೂ ಒತ್ತಡ ಜೀವನ ಸಾಗಿಸುತ್ತಿರುವುದು ಕಳವಳಕಾರಿ. ಧ್ಯಾನ ಒತ್ತಡ ದೂರವಾಗಿಸುತ್ತದೆ. ಅಲ್ಲದೆ ಮನಸ್ಸಿನಲ್ಲಿರುವ ಕಲ್ಮಶ, ಕೆಟ್ಟತನ ಹೋಗಲಾಡಿಸಿ ಎಲ್ಲರನ್ನೂ ಪ್ರೀತಿಯಿಂದ ನೋಡುವುದಕ್ಕೂ ಕಾರಣವಾಗುತ್ತದೆ. ಹಾಗಾಗಿ ಎಲ್ಲರೂ ಪ್ರತಿದಿನ ಧ್ಯಾನ, ಯೋಗಕ್ಕೆ ಸಮಯ ಮೀಸಲಿಡಬೇಕು ಎಂದರು.
ಧ್ಯಾನ ಓಡುವ ಮನಸ್ಸಿಗೆ ಕಡಿವಾಣ ಹಾಕುತ್ತದೆ. ಎಲ್ಲರಲ್ಲೂ ಪ್ರೀತಿ ವಿಶ್ವಾಸ ಮೂಡಿಸುವ ಕೆಲಸದ ಜೊತೆ ನಮ್ಮನ್ನು ನಾವು ಗೆಲ್ಲುವುದಕ್ಕೆ ಕಾರಣವಾಗುತ್ತದೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಸ್ನೇಕಾ ಅಕ್ಕ ಹೇಳಿದರು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಣೇಬೆನ್ನೂರಿನ ಮಾಲತಿ ಅಕ್ಕ, ಬ್ಯಾಡಗಿಯ ಸುರೇಖಕ್ಕ, ಹಲಗೇರಿಯ ಕಸ್ತೂರಿಯಕ್ಕ ಮಾತನಾಡಿದರು.
ವೀರಶೈವ ಮಹಾಸಭಾ ಅಧ್ಯಕ್ಷ ಸುಧೀರ್, ರೋಟರಿ ಕ್ಲಬ್‌ನ ರಘು, ಜೇಸಿಸ್‌ನ ಶಾಂತರಾಮ್, ಪರೋಪಕಾಂನ ಮಧುಕೇಶವ, ಮುಖಂಡರಾದ ಕೆ.ಎಸ್.ಗುರುಮೂರ್ತಿ, ನಿವೇದಿತಾ ರಾಜು, ಕಾಂಚನಾ ಕುಮಾರ್, ಶಿವಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.