ADVERTISEMENT

ರಿಪ್ಪನ್‌ಪೇಟೆ: ಕಾವೇರಿದ ರಾಜ್ಯೋತ್ಸವ ಸಂಭ್ರಮ; ಗೌಣವಾಯಿತು ರಣಬಿಸಿಲು...

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 5:26 IST
Last Updated 2 ನವೆಂಬರ್ 2025, 5:26 IST
ರಿಪ್ಪನ್‌ಪೇಟೆ ರಿಪ್ಪನ್ ಪೇಟೆಯಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದರು 
ರಿಪ್ಪನ್‌ಪೇಟೆ ರಿಪ್ಪನ್ ಪೇಟೆಯಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದರು    

ರಿಪ್ಪನ್‌ಪೇಟೆ: ರಣಬಿಸಿಲಿನ ತಾಪಮಾನದ ನಡುವೆಯೂ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ರಾಜ್ ಅಭಿಮಾನಿ ಬಳಗದಿಂದ ಶನಿವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವವು ಸಂಭ್ರಮದಿಂದ ನಡೆಯಿತು.

ಅಂಗನವಾಡಿ, ಶಾಲೆ, ಕಾಲೇಜು ವಿದ್ಯಾರ್ಥಿಗಳಿಂದ ಪಟ್ಟಣದ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಯಿತು. ನಂತರ ವಿನಾಯಕ ವೃತ್ತದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಧ್ವಜಾರೋಹಣ ಮಾಡಿ ಮಾತನಾಡಿದರು.

‘ಸರ್ಕಾರಿ ಹಾಗೂ ಅರೆ ಸರ್ಕಾರಿ ಉದ್ಯೋಗಗಳಲ್ಲಿ ಪರ ಭಾಷಿಕರಿಗೆ ಸರ್ಕಾರ ಮಣೆ ಹಾಕದೆ ಕನ್ನಡಿಗರಿಗೆ ಆದ್ಯತೆ ನೀಡಲೇಬೇಕು. ರಾಜ್ಯೋತ್ಸವ ಕನ್ನಡಿಗರ ಆಸ್ಮಿತೆಯ ಸಂಕೇತವಾಗಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

ನಾಡಿನ ಶಕಪುರುಷರ ದಿರಿಸು ತೊಟ್ಟ ಪುಟಾಣಿಗಳ ವೇಷ, ಭೂಷಣ, ಮಹಿಳೆಯರ ಡೊಳ್ಳು ಕುಣಿತ, ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ತಾಯಿ ಭುವನೇಶ್ವರಿಯ ಶೋಭಾ ಯಾತ್ರೆಗೆ ಪಿಎಸ್ಐ ರಾಜುರೆಡ್ಡಿ ಚಾಲನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಉದ್ಯಮಿ ಮಹೇಂದ್ರ ಗೌಡ ಮಾತನಾಡಿದರು. ಸಂಘದ ಅಧ್ಯಕ್ಷ ಜಿ.ಆರ್. ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.

ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಬಂಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಮುಖಂಡರಾದ ಆರ್. ಎ. ಚಾಬುಸಾಬ್, ನೇಮಣ್ಣ ಬಂಡಿ, ಎಂ.ಎಂ. ಪರಮೇಶ, ಎಂ.ಜಿ.ಹಬೀಬ್, ಹಸನಬ್ಬ ಬ್ಯಾರಿ ಹಾಗೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ– ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.