
ಸೊರಬ: ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ತೊಡಕಾಗಿದ್ದ ತಾಲ್ಲೂಕಿನ ಕಡೇ ಜೋಳದಗುಡ್ಡೆ ರಸ್ತೆಯು ಕೊನೆಗೂ ಅಭಿವೃದ್ಧಿ ಕಾಣುತ್ತಿದೆ. ಇದು ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ.
ಎರಡು ಕಿ.ಮಿ ಉದ್ದದ ರಸ್ತೆಯ ಅಭಿವೃದ್ಧಿಗಾಗಿ ₹20 ಲಕ್ಷ ಮೀಸಲಿಡಲಾಗಿದೆ. ರಸ್ತೆಗೆ ಜಲ್ಲಿ ಹರಡಿ, ರೋಲಿಂಗ್ ಮೂಲಕ ಮಣ್ಣು ಹಾಕಿ ಸಮತಟ್ಟು ಮಾಡುವ ಕೆಲಸ ಪೂರ್ಣಗೊಳ್ಳುವ ಹಂತದಲ್ಲಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ವಿಶೇಷ ಕಾಳಜಿಯಿಂದ ಈ ಭಾಗದ ರಸ್ತೆ ದುರಸ್ತಿ ಕಾರ್ಯವು ಚುರುಕಿನಿಂದ ಸಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಈ ಹಿಂದೆ ರಸ್ತೆಯು ಸಂಪೂರ್ಣ ದೂಳಿನಿಂದ ಕೂಡಿತ್ತು. ಮಳೆಗಾಲದಲ್ಲಿ ಕೆಸರುಮಯವಾಗುತ್ತಿತ್ತು. ಓಡಾಟ ದುಸ್ತರವಾಗಿತ್ತು. ದುರಸ್ತಿಯಂದ ಗ್ರಾಮಸ್ಥರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಜಲ್ಲಿ ಹರಡಿರುವುದು ತಾತ್ಕಾಲಿಕ ಪರಿಹಾರವಾಗಿದ್ದು, ಮುಂದಿನ ದಿನಗಳಲ್ಲಿ ಈ ರಸ್ತೆಗೆ ಶಾಶ್ವತವಾಗಿ ಡಾಂಬರೀಕರಣ ಮಾಡಿಕೊಡುವಂತೆ ಸಾರ್ವಜನಿಕರು ಮನವಿ ಮಾಡಿದರು.
ಕಡೇ ಜೋಳದಗುಡ್ಡೆ ಗ್ರಾಮ ಹೆಚ್ಚಿನ ಮೂಲ ಸೌಕರ್ಯ ಕಾಣದೇ ಉಳಿದಿದೆ. ಸಚಿವ ಮಧು ಬಂಗಾರಪ್ಪ ವಿಶೇಷ ಕಾಳಜಿ ವಹಿಸಿ ಗ್ರಾಮದ ಅಭಿವೃದ್ಧಿಗೆ ಮುಂದಾಗಿದ್ದಾರೆಎಚ್. ಗಣಪತಿ ಹುಲ್ತಿಕೊಪ್ಪ ತಾ.ಪಂ ಮಾಜಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.