ತೋವಿನಕೆರೆಯಲ್ಲಿ ವಾಲ್ಮಿಕಿ ಸಮಾಜದ ವತಿಯಿಂದ ನಡೆದ ಶ್ರೀರಾಮ ದೇವರ ಮೆರವಣಿಗೆಯಲ್ಲಿ ದಿವಂಗತ ರತನ್ ಟಾಟ ರವರ ಪೋಟೋ ವನ್ನು ಅರತಿ ಜೊತೆ ಇಟ್ಟು ಕೊಂಡು ಮೆರವಣಿಗೆ ಮಾಡಿದ್ದರು.
ತೋವಿನಕೆರೆ: ಶ್ರೀರಾಮ ಜಯಂತಿ ಅಂಗವಾಗಿ ವಾಲ್ಮಿಕಿ ಸಮಾಜದವರು ನಡೆಸಿದ್ದ ದೇವರ ಮೆರವಣಿಗೆಯಲ್ಲಿ ಮಾಲಾ ರಮೇಶ್ ತಲೆ ಮೇಲೆ ಹೊತ್ತಿದ್ದ ಅರತಿಯಲ್ಲಿ ದಿವಂಗತ ರತನ್ ಟಾಟಾರವರ ಭಾವ ಚಿತ್ರ ಇಟ್ಟು ಗ್ರಾಮಸ್ಥರ ಗಮನ ಸೆಳೆದರು.
ರತನ್ ಟಾಟಾರವರು ದೇಶದ ಅಭಿವೃದ್ದಿಗೆ ಬಹಳಷ್ಟು ಕಾಣಿಕೆ ನೀಡಿದ್ದಾರೆ. ಅವರಿಗೆ ಗೌರವ ಸಲ್ಲಿಸಲು ಇದೇ ಸರಿಯಾದ ಸಮಯ ವೆಂದು ತಿರ್ಮಾನಿಸಿ ಪತ್ನಿ ಜೊತೆ ಮಾತನಾಡಿ ಮೆರವಣಿಗೆಯಲ್ಲಿ ಟಾಟಾರವರ ಪೋಟೋವನ್ನು ಅರತಿ ಜೊತೆ ತಲೆ ಮೇಲೆ ಇಟ್ಟು ಕೊಂಡು ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆಯಲಾಯಿತು ಎಂದು ರಮೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.