ADVERTISEMENT

ಪಾವಗಡ: 5 ವರ್ಷ ಬಾಲಕನಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 7:55 IST
Last Updated 1 ಜುಲೈ 2020, 7:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಾವಗಡ: ತಾಲ್ಲೂಕಿನ 5 ಮಂದಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ.

ಪಟ್ಟಣದ ಸಾಯಿರಾಂ ಕಲ್ಯಾಣಮಂಟಪ ಬಳಿಯ 28 ವರ್ಷ ಯುವಕ, ಎಸ್.ಆರ್.ಪಾಳ್ಯದ 38 ವರ್ಷದ ಮಹಿಳೆ, ಇದೇ ಗ್ರಾಮದ 5 ವರ್ಷ ವಯಸ್ಸಿನ ಬಾಲಕ, 63 ವರ್ಷದ ವೃದ್ಧನಿಗೆ ಸೋಂಕು ದೃಢಪಟ್ಟಿದೆ. ತಾಲ್ಲೂಕಿನ ಸೂಲನಾಯಕನಹಳ್ಳಿಯ 73 ವರ್ಷ ಸೋಂಕು ತಗುಲಿದೆ.

ಇವರಲ್ಲಿ ಸೂಲನಾಯಕನಹಳ್ಳಿಯ 73 ವರ್ಷದ ವೃದ್ಧ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 4 ಮಂದಿ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ADVERTISEMENT

ಪಟ್ಟಣದ ಸಾಯಿರಾಂ ಕಲ್ಯಾಣ ಮಂಟಪ ಬಡಾವಣೆಯನ್ನು ಸೀಲ್‌ಡೌನ್ ಮಾಡಲಾಗಿದೆ. 28 ವರ್ಷ ವಯಸ್ಸಿನ ಯುವಕನ ಮನೆಗೆ ಬೆಂಗಳೂರಿನಿಂದ ಅವರ ಸಹೋದರ ಬಂದಿದ್ದರು ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.

5 ವರ್ಷದ ಬಾಲಕನಿಗೆ ಚಿಕಿತ್ಸೆ ಕೊಡಿಸಲು ಅವರ ತಾಯಿಯನ್ನು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

ಪ್ರತ್ಯೇಕ ತುರ್ತು ವಾಹನಕ್ಕೆ ಒತ್ತಾಯ: ಪಟ್ಟಣದ ಸೋಂಕಿತ ಯುವಕ ತನಗೆ ಸೊಂಕು ಇಲ್ಲ ಪ್ರತ್ಯೇಕ ತುರ್ತು ವಾಹನದಲ್ಲಿ ಕಳುಹಿಸಿಕೊಡಿ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಯ ಜತೆ ಮಾತಿನ ಚಕಮಕಿ ನಡೆಸಿದರು. ಸಿಬ್ಬಂದಿ ಸೋಂಕು ದೃಢಪಟ್ಟಿದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಕೊರೊನಾದಿಂದ ಪಾರಾಗಬಹುದು ಎಂದು ಮನವೊಲಿಸಿ ಕಳುಹಿಸಿಕೊಟ್ಟಿದ್ದಾರೆ.

ಸೋಂಕಿತರ ಪತ್ತೆಯಾಗಿರುವ ಸಾಯಿರಾಂ ಕಲ್ಯಾಣಮಂಟಪ ಬಡಾವಣೆಯನ್ನು ಕಂಟೈನ್‌ಮೆಂಟ್ ಝೋನ್ ಮಾಡಲಾಗಿದೆ. ಗ್ರಾಮಗಳನ್ನು ಸೀಲ್‌ಡೌನ್ ಮಾಡಿ, ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ.

ಪಟ್ಟಣದ ಯುವಕನ ಪ್ರಾಥಮಿಕ ಸಂಪರ್ಕದಲ್ಲಿ 16ಕ್ಕೂ ಹೆಚ್ಚಿನ ಮಂದಿ ಇದ್ದರು ಎಂಬುದು ಜನರಲ್ಲಿ ಆತಂಕ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.