ಕೊರಟಗೆರೆ ಪಟ್ಟಣದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸರಸ್ವತಿ ವಿಗ್ರಹ ಪ್ರತಿಷ್ಠಾಪಿಸಲಾಯಿತು. ಪ್ರಾಂಶುಪಾಲ ಈರಪ್ಪ ನಾಯ್ಕ ಸೇರಿದಂತೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಇದ್ದಾರೆ
ಕೊರಟಗೆರೆ: ಇಲ್ಲಿನ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಕಾಲೇಜು ಸಿಬ್ಬಂದಿ ಸಹಕಾರದೊಂದಿಗೆ ಸೋಮವಾರ ಸರಸ್ವತಿದೇವಿ ವಿಗ್ರಹ ಪ್ರತಿಷ್ಠಾಪಿಸಲಾಯಿತು.
ಕಾಲೇಜು ಆವರಣದಲ್ಲಿ ಸರಸ್ವತಿ ವಿಗ್ರಹವನ್ನು ವಿವಿಧ ಧಾರ್ಮಿಕ ವಿಧಿವಿಧಾನಗಳ ಮೂಲಕ ಪ್ರತಿಷ್ಠಾಪಿಸಿ ಲೋಕಾರ್ಪಣೆ ಮಾಡಲಾಯಿತು. ಮುಂಜಾನೆಯಿಂದಲೇ ಆಗಮಿಕರು ವಿವಿಧ ಪೂಜೆ, ಹೋಮ, ಹವನ ಹಾಗೂ ಅಭಿಷೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಂ.ಜಿ.ಸುಧೀರ್ ಮಾತನಾಡಿ, ‘ವಿದ್ಯೆ ಕಲಿಯುವ ಸ್ಥಳ ದೇಗುಲವಿದ್ದಂತೆ. ಪ್ರತಿನಿತ್ಯ ವಿದ್ಯೆ ಕಲಿಯಲು ಬರುವ ನೂರಾರು ವಿದ್ಯಾರ್ಥಿಗಳಿಗೆ ನಾಡಿನ ಸಂಸ್ಕೃತಿ ಹಾಗೂ ಧಾರ್ಮಿಕ ಭಾವ ಮೂಡಿಸುವ ದೃಷ್ಟಿಯಿಂದ ಆವರಣದಲ್ಲಿ ವಿದ್ಯೆಗೆ ಅಧಿಪತಿಯಾದ ಶಾರದಾ ದೇವಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ’ ಎಂದರು.
ಪ್ರಾಂಶುಪಾಲ ಈರಪ್ಪನಾಯ್ಕ ಮಾತನಾಡಿ, ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳೆ ಹೆಚ್ಚು ಕಲಿಯುತ್ತಿರುವ ಕಾಲೇಜನ್ನು ಯಾವುದೇ ಖಾಸಗಿ ಕಾಲೇಜಿಗೆ ಕಡಿಮೆ ಇಲ್ಲದಂತೆ ಸೌಲಭ್ಯ ಒದಗಿಸಲಾಗುತ್ತಿದೆ. ಕಲಿಕಾ ಸ್ಥಳದಲ್ಲಿ ಶ್ರದ್ಧಾ ಭಕ್ತಿ ಮೂಡಲಿ ಎಂಬ ಮಹದಾಸೆಯಿಂದ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ’ ಎಂದರು.
ಎಂ.ಜಿ.ಜ್ಯೂಯಲರ್ ಮಾಲಿಕ ಎಂ.ಜಿ.ಸುಧೀರ್, ಸುಷ್ಮಾರಾಣಿ, ಎಸ್.ಸುಶಾಂತ್ ವಾಸುಪಾಲ್, ಸಾಯಿ ಹರ್ಷಿತ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎನ್.ಪದ್ಮನಾಭ್. ಎಲ್.ನಾರಾಯಣ್, ರಂಗಶ್ಯಾಮಯ್ಯ, ಬಾಲಾಜಿ ದರ್ಶನ್, ಶ್ಯಾಂಭವಿ, ಭಾಗ್ಯಮ್ಮ, ಚೈತಾಲಿ, ದೀಪಾ, ಜ್ಯೋತಿ, ಗಿರಿಜಮ್ಮ, ಗೋವಿಂದರಾಜು, ಶಿವರಾಮಯ್ಯ, ರಮೇಶ್, ಕೆ.ವಿ.ಪುರುಷೋತ್ತಮ್, ಡಿ.ಎಂ.ರಾಘವೇಂದ್ರ, ನವೀನ್ ಕುಮಾರ್, ಚಿನ್ನಿವೆಂಕಟಶೆಟ್ಟಿ, ರಾಧಾಕೃಷ್ಣ ಶ್ರೇಷ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.