ADVERTISEMENT

ಮಧುಗಿರಿ: ಪುಲಮಾಚಿ ಗ್ರಾಮದ ಬಳಿ 5 ಕರಡಿಗಳು ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 13:16 IST
Last Updated 20 ಜನವರಿ 2023, 13:16 IST
ಕರಡಿಗಳ ಹಿಂಡು
ಕರಡಿಗಳ ಹಿಂಡು    

ಮಧುಗಿರಿ: ತಾಲ್ಲೂಕಿನ ಪುಲಮಾಚಿ ಗ್ರಾಮದ ಸಮೀಪವಿರುವ ಭೂತಪ್ಪ ದೇವಾಲಯದ ಬೆಟ್ಟದ ತಪ್ಪಲಿನಲ್ಲಿ ಶುಕ್ರವಾರ ಬೆಳಿಗ್ಗೆ
5 ಕರಡಿಗಳು ಕಾಣಿಸಿಕೊಂಡಿವೆ.

ಆಹಾರ ಹುಡುಕುತ್ತಿರುವುದನ್ನು ಗ್ರಾಮದ ಯುವಕರು ಮೊಬೈಲ್‌ನಲ್ಲಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಕರಡಿಗಳು ಪ್ರತ್ಯಕ್ಷವಾಗಿರುವ ವಿಚಾರ ಗ್ರಾಮದ ಜನರಿಗೆ ತಿಳಿಸಿ, ದೇವಾಲಯದ ಸಮೀಪ ಯಾರು ಹೋಗದಂತೆ ಮನವಿ ಮಾಡಲಾಗಿದೆ.

ಒಂದೇ ಬಾರಿಗೆ ಇಷ್ಟೊಂದು ಕರಡಿಗಳು ಪ್ರತ್ಯಕ್ಷವಾಗಿರುವುದು ಇದೇ ಮೊದಲು. ಕರಡಿಗಳನ್ನು ನೋಡಿದ ಜನರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಿ ಕರಡಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹಲವು ದಿನಗಳ ಹಿಂದೆಯೇ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಈ ಭಾಗದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ರವಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.