ADVERTISEMENT

'ತಾತನಿಗೆ ಸಚಿವ ಸ್ಥಾನ ನೀಡಿ' ಎಂದು ರಾಹುಲ್‌ ಗಾಂಧಿಗೆ ಜಯಚಂದ್ರ ಮೊಮ್ಮಗಳ ಪತ್ರ

​ಪ್ರಜಾವಾಣಿ ವಾರ್ತೆ
Published 28 ಮೇ 2023, 19:59 IST
Last Updated 28 ಮೇ 2023, 19:59 IST
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಬರೆದ ಪತ್ರದ ಜೊತೆ ಶಾಸಕ ಟಿ.ಬಿ. ಜಯಚಂದ್ರ, ಅವರ ಮಗ ಸಂದೀಪ್‌ ಮತ್ತು ಮೊಮ್ಮಗಳು ಆರ್ನಾ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಬರೆದ ಪತ್ರದ ಜೊತೆ ಶಾಸಕ ಟಿ.ಬಿ. ಜಯಚಂದ್ರ, ಅವರ ಮಗ ಸಂದೀಪ್‌ ಮತ್ತು ಮೊಮ್ಮಗಳು ಆರ್ನಾ   

ತುಮಕೂರು: ಶಾಸಕ ಟಿ.ಬಿ. ಜಯಚಂದ್ರಗೆ ಸಚಿವ ಸ್ಥಾನ ನೀಡುವಂತೆ ಅವರ ಎಂಟು ವರ್ಷದ ಮೊಮ್ಮಗಳು ಆರ್ನಾ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದಿದ್ದಾಳೆ. 

‘ನಮ್ಮ ತಾತನಿಗೆ ಸಚಿವ ಸ್ಥಾನ ನೀಡದಿರುವುದರಿಂದ ತುಂಬಾ ಬೇಸರ ಆಗಿದೆ. ಸಚಿವ ಸ್ಥಾನಕ್ಕೆ ಅವರು ಸೂಕ್ತವಾದ ವ್ಯಕ್ತಿ. ಅವರು ಶ್ರಮ ಜೀವಿ. ಜನರಿಗೆ ಸಹಾಯ ಮಾಡುತ್ತಾರೆ. ಅದಕ್ಕೆ ಅವರು ಸಚಿವರಾಗಬೇಕು’ ಎಂದು ಪತ್ರ ಹಾಗೂ ವಿಡಿಯೊ ಮೂಲಕ ಮನವಿ ಮಾಡಿದ್ದಾಳೆ. 

‘ನಮ್ಮ ತಾತ ಜನರನ್ನು ತುಂಬಾ ಪ್ರೀತಿ ಮಾಡುತ್ತಾರೆ. ಅವರಿಗೆ ಸಚಿವ ಸ್ಥಾನ ಕೊಡುವಂತೆ ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದಿದ್ದೇನೆ. ದಯವಿಟ್ಟು ಈ ಪತ್ರವನ್ನು ಓದಿ’ ಎಂದು ಆಕೆ ಮನವಿ ಮಾಡಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ADVERTISEMENT

‘ಮಗಳು ಸ್ವಇಚ್ಛೆಯಿಂದ ಪತ್ರ ಬರೆದಿದ್ದಾಳೆ. ಸೋಮವಾರ ಇದನ್ನು ರಾಹುಲ್‌ ಗಾಂಧಿ ಅವರಿಗೆ ಕಳುಹಿಸಲಾಗುವುದು’ ಎಂದು ಜಯಚಂದ್ರ ಅವರ ಪುತ್ರ ಸಂದೀಪ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.